ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರು: ಎಳ್ಳಷ್ಟು ಸಂಶಯ ಬೇಡ- ಸಚಿವ ಹೆಚ್. ಸಿ ಮಹದೇವಪ್ಪ ಮೈಸೂರು,ಸೆಪ್ಟಂಬರ್,27,2024 (..):ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರು. ಅವರು ಯಾವುದೇ ತಪ್ಪು ಮಾಡಿಲ್ಲ. ಇದರ ಬಗ್ಗೆ ಎಳ್ಳಷ್ಟು ಸಂಶಯ ಬೇಡ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ನುಡಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ವಿಪಕ್ಷಗಳನ್ನು ಗುರಿ ಮಾಡಿ ಐಟಿ, ಇಡಿ, ಸಿಬಿಐ ದಾಳಿ ಮಾಡಲಾಗುತ್ತಿದೆ. ಹೀಗಾಗಿ ಸಿಬಿಐ ಮೇಲೆ ಅಂಕುಶ ಎಂದು ಹೇಳಿದರು. ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ರಾಜೀನಾಮೆ ಕೇಳಲು ಇವರು ಯಾರು? ತನಿಖಾ ವರದಿಗೂ ಮುನ್ನ ಮಾತನಾಡಲು ಇವರೇನು ಜಡ್ಜ್ ಗಳ..? ಎಂದು ಕುಟುಕಿದರು. ಸಿಎಂ ಸಿದ್ದರಾಮಯ್ಯ ಪರ ಶಾಸಕರು, ಜನರು ಇರುವವರೆಗೂ ಏನು ಮಾಡಲು ಆಗಲ್ಲ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರು ಇದರ ಬಗ್ಗೆ ಎಳ್ಳಷ್ಟು ಅನುಮಾನ ಬೇಡ. ಸಿದ್ದರಾಮಯ್ಯ ಪರ ಹೈಕಮಾಂಡ್ 100ಕ್ಕೆ 100ರಷ್ಟು ಇದೆ ಎಂದರು. : , , ,