ಅಪ್ಪು ಪುಣ್ಯತಿಥಿ: ದೊಡ್ಮನೆಯಿಂದ ಅರಮನೆ ಆವರಣದಲ್ಲಿ 22 ಸಾವಿರ ಮಂದಿಗೆ ಅನ್ನ ಸಂತರ್ಪಣೆ ಬೆಂಗಳೂರು, ನವೆಂಬರ್ 09, 2021 (..):ನಟ ಪುನೀತ್‌ ರಾಜ್‌ಕುಮಾರ್‌ 11ನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ಇಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದ ಸುತ್ತ ಪೊಲೀಸರಿಂದ ಬಂದೋಬಸ್ತ್‌ ಒದಗಿಸಲಾಗಿದೆ. ದೊಡ್ಮನೆಯಿಂದ ಅಭಿಮಾನಿಗಳು, ಗಣ್ಯರಿಗಾಗಿ ಈ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. 15 ಸಾವಿರ ಜನರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮತ್ತು 4 ಸಾವಿರ ಜನರಿಗೆ ಸಸ್ಯಾಹಾರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 22 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. … : . ’ 22 , 9, 2021 (..): . ’ 22,000 , 11th ’ . . . - 15,000 4,000 .: / 11th / / 22,000 /