ಇಂದು ನಟ ಪುನೀತ್ ರಾಜ್ ಕುಮಾರ್ 11ನೇ ದಿನದ ಪುಣ್ಯತಿಥಿ ಹಿನ್ನೆಲೆ: ಕುಟುಂಬಸ್ಥರಿಂದ ಸಮಾಧಿಗೆ ಪೂಜೆ ಸಲ್ಲಿಕೆ. ಬೆಂಗಳೂರು,ನವೆಂಬರ್8,2021(..): ಇಂದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯ ಹಿನ್ನೆಲೆ ನಟ ಪುನೀತ್ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು. ಕಂಠೀರವ ಸ್ಟುಡಿಯೋದಲ್ಲಿರುವ ನಟ ಪುನೀತ್ ರಾಜ್ ಕುಮಾರ್ ಸಮಾಧಿಗೆ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ, ವಂದಿತಾ ಹಾಗೂ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಸಮಾಧಿ ಬಳಿ ಹಣ್ಣು ಹಂಪಲು, ವಿಶೇಷ ತಿಂಡಿ ತಿನಿಸುಗಳನ್ನಿಟ್ಟು ಎಡೆಹಾಕಿ ಪೂಜೆ ಸಲ್ಲಿಕೆ ಮಾಡಲಾಯಿತು. : - - -- .. ’ , 8, 2021 (..): - .’ , , , , . , , .: / /