ಸಿದ್ಧರಾಮಯ್ಯ ವಿಷಸರ್ಪದಂತೆ: ಅವರ ಅವಧಿಯಲ್ಲೇ ಹೆಚ್ಚು ಮತಾಂತರ- ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ. ಬೆಂಗಳೂರು,ನವೆಂಬರ್,6,2021(..):ಸಿದ್ಧರಾಮಯ್ಯ ವಿಷ ಸರ್ಪದಂತೆ. ಸಿದ್ಧರಾಮಯ್ಯ ಅವಧಿಯಲ್ಲೇ ಹೆಚ್ಚು ಮತಾಂತರವಾಗಿದೆ ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ , ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಮನಸ್ಸಿನಲ್ಲಿ ದಲಿತ ವಿರೋಧಿ. ಬಾಯಲ್ಲಿ ಮಾತ್ರ ದಲಿತ ಪ್ರೇಮವಿದೆ. ಸಿದ್ದರಾಮಯ್ಯ ಕಾಲದಲ್ಲಿ ಅತಿ ಹೆಚ್ಚು ಮತಾಂತರವಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ದಲಿತರು ಮತಾಂತರವಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಸೋನಿಯಾ ಗಾಂಧಿ ಮೆಚ್ಚಿಸುವುದಕ್ಕೆ ಮತಾಂತರಕ್ಕೆ ಅವಕಾಶ ನೀಡಿದ್ದರು ಎಂದು ಆರೋಪಿಸಿದರು. ಸಿದ್ಧರಾಮಯ್ಯ ಜೆಡಿಎಸ್ ಬಿಟ್ಟು ಪಕ್ಷ ಕಟ್ಟಿದರು. ನಂತರ ಎಲ್ಲಾ ಕಡೆ ಸೋತು ಕಾಂಗ್ರೆಸ್ ಸೇರಿಕೊಂಡರು. ಕಟ್ಟಿದ ಮನೆಯಲ್ಲಿ ಸಿದ್ದರಾಮಯ್ಯ ವಿಷ ಸರ್ಪದಂತೆ ಸೇರಿಕೊಂಡರು. ರಾಜ್ಯ ಕಾಂಗ್ರೆಸ್‌ನಲ್ಲಿ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದರು. ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬ ಮಾತು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸೂಕ್ತವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. 70 ವರ್ಷ ಕಾಂಗ್ರೆಸ್‌ನವರೇ ದೇಶವನ್ನು ಆಳಿದ್ದಾರೆ. ಆದ್ರೂ ದಲಿತರಿಗೆ ಹೊಟ್ಟೆ ಹಸಿವು ಇದೆ ಅಂತಾಯ್ತಲ್ಲ. ಕಾಂಗ್ರೆಸ್‌ ಪಕ್ಷವನ್ನು ಯಾರೂ ನಂಬಬೇಡಿ. ಅದು ಸುಡುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್‌ಗೆ ಹೋದರೆ ಆತ್ಮಹತ್ಯೆಗೆ ಸಮ ಎಂದು ಹೇಳಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಲಸೆ ಗಿರಾಕಿ ಅಲ್ವಾ? ಕಾಂಗ್ರೆಸ್ ಪಕ್ಷದ ಇತಿಹಾಸ ಸಿದ್ದರಾಮಯ್ಯಗೆ ಗೊತ್ತಿದ್ಯಾ? ಜೆಡಿಎಸ್‌ನಲ್ಲಿದ್ದವರು ಹೊಟ್ಟೆಪಾಡಿಗೆ ಕಾಂಗ್ರೆಸ್ ಸೇರಲಿಲ್ವಾ? ಅವರು ಬಂದಮೇಲೆ ದೊಡ್ಡ ದಲಿತ ನಾಯಕರು ಕಾಣೆಯಾದ್ರು. ದಲಿತ ಮುಖಂಡರ ತಲೆ ಮೇಲೆ ಕಾಲಿಟ್ಟು ಮುಗಿಸಿದ್ರು ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು. : - - -