ಸಿಲಿಂಡರ್ ಸ್ಪೋಟ: 7 ಮಂದಿಗೆ ಗಾಯ. ಬೆಂಗಳೂರು,ನವೆಂಬರ್,6,2021(..):ಸಿಲಿಂಡರ್ ಸ್ಪೋಟಗೊಂಡು 7ಮಂದಿಗೆ ಗಾಯಗಳಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಅನೇಕಲ್ ತಾಲ್ಲೂಕಿ ನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ಉತ್ತರ ಭಾರತ ಮೂಲದ 7 ಮಂದಿಗೆ ಗಾಯಗಳಾಗಿದೆ. ಪ್ರಕಾಶ್, ಜಗದೀಶ್ ,ಕಾಡು, ಜೈಮುಲ್, ಮಂಜುಗೆ ಗಾಯಗಳಾಗಿದ್ದು ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಇಂದು ಬೆಳಿಗ್ಗೆ ಸಿಲಿಂಡರ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿದೆ. ಈ ವೇಳೆ ಮನೆಯಲ್ಲಿದ್ದ 7 ಕಾರ್ಮಿಕರಿಗೆ ಗಾಯಗಳಾಗಿದೆ. : - -7