ನಾಳೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಗೋ ಪೂಜೆ. ಮೈಸೂರು,ನವೆಂಬರ್,4,2021(..):ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಹಿನ್ನೆಲೆ, ನಾಳೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಗೋ ಪೂಜೆ ನೆರವೇರಲಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ದೀಪಾವಳಿಯಂದು ವಿಶೇಷ ಗೋ ಪೂಜೆ ಸಲ್ಲಿಸಲಾಗುತ್ತಿದ್ದು, ನಾಳೆ ಸಂಜೆ 5.30 ರಿಂದ 6.30 ಒಳಗಿನ ಗೋಧೂಳಿ ಲಗ್ನದಲ್ಲಿ ಗೋ ಪೂಜೆ ನೆರವೇರಲಿದೆ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ದೀಪಾವಳಿಯಂದು ಗೋ ಪೂಜೆ ನಡೆಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಸೂಚನೆ ಮೇರೆಗೆ ಚಾಮುಂಡಿ ಬೆಟ್ಟದಲ್ಲಿ ನಾಳೆ ವಿಶೇಷ ಗೋ ಪೂಜೆ ನೆರವೇರಲಿದೆ. : - - – - .