ಪೆಟ್ರೋಲ್, ಡೀಸೆಲ್ ಬೆಲೆ ತಲಾ 7 ರೂ. ಇಳಿಸುತ್ತೇವೆ: ಇಂದು ಸಂಜೆಯಿಂದಲೇ ಜಾರಿ- ಸಿಎಂ ಬಸವರಾಜ ಬೊಮ್ಮಾಯಿ. ಹುಬ್ಬಳ್ಳಿ,ನವೆಂಬರ್,4,2021(..):ಪೆಟ್ರೋಲ್, ಡೀಸೆಲ್ ಬೆಲೆ ತಲಾ 7ರೂ. ಇಳಿಸುತ್ತೇವೆ. ಇಂದು ಸಂಜೆಯಿಂದಲೇ ದರ ಇಳಿಕೆ ಜಾರಿಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 2100 ಕೋಟಿ ರೂ ಹೊರೆಯಾಗಲಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿ ದೀಪಾವಳಿ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರವೂ ಸಹ ಇದೇ ನಿರ್ಧಾರ ಕೈಗೊಂಡಿದೆ ಎಂದರು. ಇನ್ನು ಹೈಕಮಾಂಡ್ ನಿಂದ ಯಾವುದೇ ಬುಲಾವ್ ಬಂದಿಲ್ಲ. ಸಚಿವ ಸಂಪುಟ ವಿಸ್ತರಣೆಗೆ ದೆಹಲಿಗೆ ಹೋಗಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. : - - – - … “ . 7”: – , 4, 2021 (..): . 7/- . , . 2,100 . “ , .”: / / / . 7