ಉಪಚುನಾವಣೆ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ: ಅದು ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ- ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ನವೆಂಬರ್,3,2021(..):ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಉಪ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಉಪಚುನಾವಣೆ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉಪಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಅಂತಾ ವಿಪಕ್ಷಗಳು ಹೇಳೋದು ಸಹಜ. ಆಗಾದ್ರೆ ಸಿಂದಗಿ ಉಪಚುನಾವಣೆ ಫಲಿತಾಂಶ ದಿಕ್ಸೂಚಿ ಅಂತಾ ಹೇಳಬಹುದೇ..? ದಿಕ್ಸೂಚಿ ಸಿಂದಗಿಯಿಂದಲೇ ಆರಂಭವಾಗಬೇಕು. ಕಾಂಗ್ರೆಸ್ 31 ಸಾವಿರ ಅಂತರದಿಂದ ಸೋತಿದ್ದಾರೆ. ಮೊದಲು ಕಾಂಗ್ರೆಸ್ ಅದನ್ನ ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ಧರು. ನಂತರ ಒಂದೇ ವರ್ಷಕ್ಕೆ ಅಲ್ಲಿ ಸೋತರು. ನಂತರ ಚುನಾವಣೆಯಲ್ಲೂ ಸೋತರು. ಹೀಗಾಗಿ ಉಪಚುನಾವಣೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದು ಹೇಳೋದು ಸರಿಯಲ್ಲ ಎಂದರು. ಬಿಟ್ ಕಾಯಿನ್ ಆರೋಪಪಟ್ಟಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷಗಳು ಆರೋಪಿಸಿವೆ. ದಾಖಲೆ ಬಿಡುಗಡೆ ಮಾಡಲಿ. ನಾವು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದೇವೆ ಎಂದರು. : -- - – - - . … ‘ ’ .’: – , 3, 2021 (..): “ . ,” . , . “ …? . 31,000 . ,” .“ , . . . , ,” .: / / ’ ./