ಬಿಟ್ ಅಂದ್ರೆ ಪೊಲೀಸ್ ಬೀಟ್ ಅನ್ಕೊಂಡಿದ್ರಂತೆ ಸಚಿವ ವಿ.ಸೋಮಣ್ಣ. ಬೆಂಗಳೂರು,ನವೆಂಬರ್,2,2021(..):ಸಚಿವ ವಿ.ಸೋಮಣ್ಣ ಅವರಿಗೆ ಬಿಟ್ ಕಾಯಿನ್ ಅಂದ್ರೆ ಗೊತ್ತಿಲ್ಲವಂತೆ. ಈ ಬಗ್ಗೆ ಸ್ವತಃ ಸಚಿವ ವಿ.ಸೋಮಣ್ಣ ಅವರೇ ಹೇಳಿದ್ದಾರೆ. ಹೌದು, ಬಿಟ್ ಕಾಯನ್ ಪ್ರಕರಣದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಆರೋಪ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ವಿ.ಸೋಮಣ್ಣ, ಆ ಪುಣ್ಯಾತ್ಮರಿಗೆ ಕೇಳಿ. ಬಿಟ್ ಅಂದ್ರೆ ನನಗೆ ಗೊತ್ತಿಲ್ಲ. ಬೀಟ್ ಅಂದ್ರೆ ಪೊಲೀಸ್ ಬೀಟ್ ಅನ್ಕೊಂಡಿದ್ದೆ ನಾನು ಎಂದು ಹೇಳಿದ್ದಾರೆ. ನಾನು ಬೆಂಗಳೂರಿಗೆ ಬಂದು 51 ವರ್ಷ ಆಗಿದೆ. ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅದೇನಾದ್ರೂ ಇದ್ರೆ ಹೇಳಲಿ. ಹಿಟ್ ಅಂಡ್ ರನ್ ಬೇಡ. ಅವರು ಮಂತ್ರಿ ಆಗಿದ್ರು, ನಾನು ಮಂತ್ರಿಯಾಗಿದ್ದೆ. ಅದೃಷ್ಟದಿಂದ ಅವರು ಮುಖ್ಯಮಂತ್ರಿಯಾಗಿದ್ರು. ಯಾರೇ ಏನೇ ಮಾತನಾಡಲಿ. ಆದರೆ ಅವರು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಲಿ ಎಂದರು. ಹಾನಗಲ್‌ನಲ್ಲಿ ಕೋವಿಡ್-19 ವೇಳೆ ಎಡವಿದ್ದೇವೆ. ಮುಖ್ಯಮಂತ್ರಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ ಎಂದು ವಿ.ಸೋಮಣ್ಣ ಹೇಳಿದರು. - - – -