ಮತ್ತೆ ಕೊರೊನಾ ಕಾಟ: ಚೀನಾದಲ್ಲಿ ಮತ್ತೆ ಉಲ್ಬಣಿಸುತ್ತಿದೆ ಸೋಂಕು ಬೆಂಗಳೂರು, ಅಕ್ಟೋಬರ್ 31, 2021 (..):ಚೀನಾದಲ್ಲಿ 107 ಕೋಟಿಗೂ ಹೆಚ್ಚು ಜನರಿಗೆ ಸಂಪೂರ್ಣ ಲಸಿಕೆ ಹಾಕಿದ್ದರೂ ಈಗ ಕೋವಿಡ್​ ಸಾಂಕ್ರಾಮಿಕತೆ ಮತ್ತೆ ಉಲ್ಬಣಗೊಳ್ಳುತ್ತಿದೆ. 14 ಪ್ರಾಂತ್ಯಗಳಲ್ಲಿ ಮಹಾಮಾರಿ ಹರಡಿ ಕಳವಳ ಉಂಟು ಮಾಡಿದೆ. ಬಂದರುಗಳ ಪ್ರವೇಶದ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಕ್ಟೋಬರ್​ 17ರಿಂದ 29ರ ನಡುವೆ ಸುಮಾರು 377 ಪ್ರಕರಣಗಳು ಸ್ಥಳಿಯವಾಗಿ ಹರಡಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಅಧಿಕಾರಿಗಳು ತಿಳಿಸಿದ್ದಾರೆ. 2020ರ ಆರಂಭದಲ್ಲೇ ಸಾಂಕ್ರಾಮಿಕತೆಗೆ ಚೀನಾ ಕಡಿವಾಣ ಹಾಕಿದ್ದರೂ ಆಗಾಗ ಸೋಂಕು ಸ್ಫೋಟಗೊಳ್ಳುತ್ತಲೇ ಇದ್ದು ಸರ್ಕಾರದ ತಲೆನೋವನ್ನು ಹೆಚ್ಚಿಸಿದೆ.