ಮುಂದಿನ ಐದು ದಿನ ಕಂಠೀರವ ಸ್ಟೂಡಿಯೋಗೆ ಪ್ರವೇಶ ನಿರ್ಬಂಧ, 144 ಸೆಕ್ಸನ್ ಜಾರಿ ಬೆಂಗಳೂರು, ಅಕ್ಟೋಬರ್ 31, 2021 (..):ಇನ್ನು ಐದು ದಿನ ಕಂಠೀರವ ಸ್ಟೂಡಿಯೋಗೆ ಪ್ರವೇಶ ನಿರ್ಬಂಧ ವಿಧಿಸಿ ಸರಕಾರ ಆದೇಶ ಹೊರಡಿಸಿದೆ. ಮೂರು ದಿನದ ಬಳಿಕ ಅಪ್ಪು ಕುಟುಂಬದಿಂದ ಹಾಲು-ತುಪ್ಪ ಬಿಡುವ ಕಾರ್ಯ ನಡೆಯಲಿದೆ.ಕಂಠೀರವ ಸ್ಟೂಡಿಯೋಗೆ ಸುತ್ತಮುತ್ತ 144 ಸೆಕ್ಸನ್ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ನಿರ್ಬಂಧ ಜಾರಿಯಲ್ಲಿರಲಿದೆ. ಈ ಸಂಬಂಧ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳು ಜಮಾಯಿಸುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.