ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್ ‘ಅಪ್ಪು’. ಬೆಂಗಳೂರು, ಅಕ್ಟೋಬರ್,29,2021(..):ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(46) ಕೊನೆಯುಸಿರೆಳೆದಿದ್ದಾರೆ. ಬೆಳಿಗ್ಗೆ ಜಿಮ್ ಕಸರತ್ತು ನಡೆಸುತ್ತಿದ್ದ ವೇಳೆ ಬೆಳಿಗೆಗ 11 ಗಂಟೆ ವೇಳೆಗೆ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ್ದಂತ ವೈದ್ಯರು, ಅವರ ಸ್ಥಿತಿ ಗಂಭೀರಗೊಂಡಿದೆ. ಅಂತಿಮ ಹಂತದ ಎಲ್ಲಾ ಚಿಕಿತ್ಸೆ ನಡೆಸುತ್ತಿರೋದಾಗಿ ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಯ ನಂತರ, ಹೃದಯಾಘಾತಕ್ಕೆ ಒಳಗಾದ ಅವರಿಗೆ ಕಡೆಯ ಕ್ಷಣದ ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸಿದರೂ, ಚಿಕಿತ್ಸೆಗೆ ಪ್ರತಿಸ್ಪಂದಿಸದ ಹಿನ್ನೆಲೆ, ಇಂದು ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ. ನೇತ್ರದಾನ.. ನಟ ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವರನಟ ಡಾ.ರಾಜ್ ಕುಮಾರ್ ನೇತ್ರದಾನದ ಪ್ರೇರಕರಾಗಿ ಸಮಾಜದ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದರು. ಇದೀಗ ಅವರ ಪುತ್ರ ಪುನೀತ್ ರಾಜ್ ಕುಮಾರ್ ಸ್ವಯಂ ನೇತ್ರದಾನ ಮಾಡುವ ಮೂಲಕ ಮಾನವೀಯತೆಯನ್ನ ಮೆರೆದಿದ್ದಾರೆ. : - (46) – . … ’ , 29, 2021 (..): ’ . . , . 46 . 11.00 . , . . ’ , . . .: / / /