ಕಾಲೇಜಿಗೆ ನುಗ್ಗಿ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ್ಧ ಮೂವರು ಆರೋಪಿಗಳು ಅರೆಸ್ಟ್. ಕಲಬುರಗಿ,ಅಕ್ಟೋಬರ್,29,2021(..):ಕಾಲೇಜಿಗೆ ನುಗ್ಗಿ ಏರ್ ಗನ್ ತೋರಿಸಿ ವಿದ್ಯಾರ್ಥಿಗಳಿಗೆ ಸಿನಿಮಾ ಸ್ಟೈಲ್ ನಲ್ಲಿ ಬೆದರಿಕೆ ಹಾಕಿದ್ಧ ಮೂವರು ದುಷ್ಕರ್ಮಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ರಾಮಮನೋಹರ ಲೋಹಿಯಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಆಳಂದ ಪಟ್ಟಣದ ಅಮೀರ್ ಸೊಹೇಲ್, ಬಶೀರ್​ ಅಹ್ಮದ್ ಮತ್ತು ಅಮೇನ್ ಪಟೇಲ್ ಬಂಧಿತರು. ಆಳಂದ ಪಟ್ಟಣದಲ್ಲಿ ಕೆಲ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ಮಾಡಿದವರು ಡಾ.ರಾಮ್ ಮನೋಹರ ಲೋಹಿಯಾ ಕಾಲೇಜು ವಿದ್ಯಾರ್ಥಿಗಳು ಅಂತಾ ತಿಳಿದು ಕಾಲೇಜಿಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಈ ರೀತಿ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಕೋಣೆಗೆ ನುಗ್ಗಿ, ಏರ್​​ ಗನ್ ತೋರಿಸಿ ಭೀತಿ ಹುಟ್ಟಿಸಿದ್ದ ಈ ಮೂವರನ್ನು ಬಂಧಿಸಲಾಗಿದೆ. ಕಾಲೇಜಿನ ಕೋಣೆಗೆ ನುಗ್ಗಿ ಬೆದರಿಕೆ ಹಾಕಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : —- – – -