ಲಿಂಗಾಂಬುದಿ ಕೆರೆ ನೀರು ಹೋಗುವ ತೂಬುಗಳು ಬಂದ್: ಮಳೆ ಮುಂದುವರೆದರೆ ಮೈಸೂರಿಗೆ ಜಲ ಗಂಡಾಂತರ..? ಮೈಸೂರು,ಅಕ್ಟೋಬರ್,28,2021(..):ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ ಮಹಾಮಳೆ ಅವಾಂತರವನ್ನೇ ಸೃಷ್ಠಿಸಿದ್ದು, ಈ ಮಧ್ಯೆ ಹೀಗೆಯೆ ಮಳೆ ಮುಂದುವರೆದರೆ ಮೈಸೂರಿಗೆ ಜಲ ಗಂಡಾಂತರ ಎದುರಾಗುವ ಸಾಧ್ಯತೆ ಇದೆ. ಹೌದು, ಏಕೆಂದರೇ ಭೂ ಬಕಾಸೂರುರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾಯ್ತು ಇದೀಗ ಕೆರೆ ತೂಬನ್ನೂ ಸಹ ನುಂಗಿದ್ದಾರೆ. ಹೌದು,ಲೇಔಟ್ ನಿರ್ಮಾಣಕ್ಕಾಗಿ ಲಿಂಗಾಂಬುದಿ ಕೆರೆ ನೀರು ಹೋಗುವ ತೂಬುಗಳು ಬಂದ್ ಆಗಿವೆ. ಕಾಂಕ್ರೀಟ್ ನಿಂದಾಗಿ ಲಿಂಗಾಬುದಿ ಕೆರೆ ಏರಿಯ ಎರಡು ತೂಬುಗಳ ಬಂದ್ ಆಗಿದ್ದು, ಕೆರೆಯಿಂದ ನೀರು ಹೊರಹೋಗಲಾಗದೆ ಏರಿ ಒಡೆಯುವ ಭೀತಿ ಉಂಟಾಗಿದೆ. ಮಹಾಮಳೆಯಿಂದ ಲಿಂಗಾಂಬುದಿಕೆರೆ ಸಂಪೂರ್ಣ ಭರ್ತಿಯಾಗದ್ದು, ಹೆಚ್ಚುವರಿ ನೀರು ಹೊರಹೋಗುವ ಕೋಡಿ ಭಾಗವೂ ಬಂದ್ ಆಗಿರುವುದರಿಂದಾಗಿ ಕೆರೆಯಿಂದ ನೀರು ಹೊರಹೋಗಲಾಗದೆ ಏರಿ ಒಡೆಯುವ ಭೀತಿ ಎದುರಾಗಿದೆ. ಇನ್ನು ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದರೂ ಸಹ ಸಮಸ್ಯೆ ಬಗೆಹರಿಸದೆ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. : - - - … : , 28, 2021 (..): . , . . , . , . . . , . , . , .: / / /