ಸಂಭಾವನೆ ಕೊಡದೇ ವಂಚನೆ: ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ ತಮನ್ನಾ ಬೆಂಗಳೂರು, ಅಕ್ಟೋಬರ್ 26, 2021 (..):ನಟಿ ತಮನ್ನಾ ಅವರಿಗೆ ಮೋಸ ಆಗಿದೆ. ಇದರ ವಿರುದ್ಧ ನಟಿ ಸಮರ ಸಾರಲು ಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರಂತೆ ಮಿಲ್ಕಿ ಬ್ಯೂಟಿ! ಹೌದು. ಸಂಭಾವನೆ ವಿಷಯದಲ್ಲಿ ತಮನ್ನಾಗೆ ವಂಚನೆಯಾಗಿದೆ. ತೆಲುಗಿನ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್​ ಶೆಫ್’​ ಅಡುಗೆ ಶೋವನ್ನು ತಮನ್ನಾ ನಡೆಸಿಕೊಡುತ್ತಿದ್ದರು. ಈ ಶೋ ನಿರೂಪಣೆಗೆ ತಮನ್ನಾ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟಿಗೆ ಸರಿಯಾಗಿ ಸಂಭಾವನೆ ನೀಡದೆ ವಂಚಿಸಲಾಗಿದೆಯಂತೆ. ತಮಗಾಗಿರುವ ಮೋಸದ ವಿರುದ್ಧ ತಮನ್ನಾ ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರಂತೆ.