ವಿಶ್ವದ ಅಗ್ರ ಶ್ರೇಣಿ ವಿಜ್ಞಾನಿ : ಎರಡನೇ ಬಾರಿಗೆ ಸ್ಥಾನ ಪಡೆದ ಮೈಸೂರಿನ ಪ್ರೊ. ಕೆ.ಎಸ್. ರಂಗಪ್ಪ. ಮೈಸೂರು, ಅಕ್ಟೋಬರ್ ೨೫, ೨೦೨೧ (..): ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ರಾಸಾಯನಶಾಸ್ತ್ರ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಅವರು ಸಾವಯವ ರಾಸಾಯನಿಕ ಕ್ಷೇತ್ರದಲ್ಲಿ ವಿಶ್ವದ ೨% ಅತ್ಯುತ್ತಮ ವಿಜ್ಞಾನಿಗಳ ಪೈಕಿ ಎರಡನೆಯ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಈ ರ್ಯಾಂಕಿಂಗ್ ಪಟ್ಟಿಯನ್ನು ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತದೆ. ೨೦೨೦ರಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಡಾ. ಕೆ.ಎಸ್. ರಂಗಪ್ಪ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ, ಅಕ್ಟೋಬರ್ ೧೯, ೨೦೨೧ರಂದು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವರದಿಯಲ್ಲಿ ಈ ಪ್ರಶಂಸೆ ನೀಡಲಾಗಿದೆ. ಇದರೊಂದಿಗೆ, ಇದೇ ಸಂಸ್ಥೆ ಮತ್ತೊಂದು ವರದಿಯನ್ನು ಸಿದ್ಧಪಡಿಸಿದ್ದು, ೨೦೨೦ರ ಕ್ಯಾಲೆಂಡರ್ ವರ್ಷದಲ್ಲಿ ಸಂಸ್ಥೆ ವಿಶ್ವದ ಅತ್ಯುತ್ತಮ ೨% ವಿಜ್ಞಾನಿಗಳನ್ನು ಅನ್ವೇಶಿಸಿತ್ತು. ಪ್ರೊ. ರಂಗಪ್ಪ ಅವರು ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ೬೦ ವರ್ಷಗಳಿಗೆ ಮೇಲ್ಪಟ್ಟಂತಹ ವಿಜ್ಞಾನಿಗಳ ಪೈಕಿ ಈ ಪ್ರಶಂಸೆಗೆ ಪಾತ್ರವಾಗಿರುವ ಏಕೈಕ ವಿಜ್ಞಾನಿ ಎನಿಸಿಕೊಂಡಿದ್ದಾರೆ.ವಿಶ್ವದ ೨% ಅತ್ಯುನ್ನತ ವಿಜ್ಞಾನಿಗಳ ಶ್ರೇಯಾಂಕದ ವಿವರಗಳನ್ನು ಈ ಕೆಳಕಂಡ ವೆಬ್‌ಲಿಂಕ್‌ನಲ್ಲಿ ನೋಡಬಹುದು. 2021 - “ - ” : . . . - - - 2% . : . . . , 2% . , , . 2020, 19 2021. , 2% 2020. 60 2% . 2021 - “ - ”