..400 ವರ್ಷಗಳ ಕಲ್ಯಾಣಿ ಪತ್ತೆಯಾಯ್ತು ರಾಜರೂರಿನಲ್ಲಿ…! ಮೈಸೂರು, ಅ.23, 2021 : (.. ) : ಸರಿ ಸುಮಾರು ನಾನೂರು ವರ್ಷಗಳಷ್ಟು ಹಿಂದಿನ ಕಲ್ಯಾಣಿಯೊಂದು ಇದೀಗ ಮತ್ತೆ ಸಿಕ್ಕಿದೆ. ಅದು ಪಿಡಿಒ ಒಬ್ಬರ ಜಸ್ಟ್ ಒಂದು ಸಣ್ಣ ಕುತೂಹಲ, ಉತ್ಸಾಹದ ಫಲವಾಗಿ ಕಲ್ಯಾಣಿ ಪತ್ತೆಯಾಗಿದೆ. ಮೈಸೂರು ಹೊರ ವಲಯದ ನಾಗವಾಲದಲ್ಲಿ ಈ ಕಲ್ಯಾಣಿ ಪತ್ತೆಯಾಗಿರುವುದು ಮಾತ್ರವಲ್ಲ, ಇದೀಗ ಕಲ್ಯಾಣಿಯನ್ನು ಸಂರಕ್ಷಿಸಿ ಅಲ್ಲಿ ನೀರು ತುಂಬಂತೆಯೂ ಮಾಡಲಾಗಿದೆ. ಇದರ ರೂವಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ () ಶೋಭಾ ದಿನೇಶ್.ಈ ಬಗ್ಗೆಜಸ್ಟ್ ಕನ್ನಡ, ಪಿಡಿಒ ಶೋಭಾ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದಿಷ್ಟು… ಪಂಚಾಯ್ತಿ ಅಧ್ಯಕ್ಷರಾದ ಸಿ.ನರೇಂದ್ರ ಅವರ ಜತೆಗೆ ನಾಗವಾಲ ಸಮೀಪದ ಅಂದಾಜು 25 ಎಕರೆ ಪ್ರದೇಶ ವಿಸ್ತೀರ್ಣದ ಕೆರೆ ಸಮೀಕ್ಷೆಗೆ ತೆರಳಿದ್ದೇ. ಆಗ ಅವರು, ನಾನು ಚಿಕ್ಕವನಿದ್ದಾಗ ಈ ಕೆರೆ ಬಳಿ ಕಲ್ಯಾಣಿಯೊಂದನ್ನು ನೋಡಿದ್ದೆ . ನೂರಾರು ವರ್ಷಗಳ ಹಳೇಯ ಕಲ್ಯಾಣಿ ಅದು ಎಂಬುದಾಗಿ ಹಿರಿಯರು ಹೇಳುತ್ತಿದ್ದರು. ಅಲ್ಲಿಂದಲೇ ನೀರು ತರುತ್ತಿದ್ದ ವಿಷಯವನ್ನು ನೆನಪಿಸಿಕೊಂಡರು. ನೂರಾರು ವರ್ಷದ ಹಿಂದಿನ ಒಂದು ಕಲ್ಯಾಣಿ ಈ ಜಾಗದಲ್ಲಿತ್ತು ಅಂತ ಕೇಳ್ಪಟ್ಟಾಗ ನೋಡೋ ಉಮ್ಮೇದಿ ಶುರು ಆಯ್ತು. ಸರಕಾರದ ‘ ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಯಡಿ ಈ ಕೆರೆ ಸಹ ಸೇರ್ಪಡೆಗೊಂಡಿತ್ತು. ಜತೆಗೆ ನರೇಗಾ ಯೋಜನೆಯಡಿ ‘ ಜಲ ಶಕ್ತಿ ಅಭಿಯಾನ’ ದಲ್ಲಿ ಕೆರೆ ಉಳೆತ್ತಿ ಅದನ್ನು ಅಭಿವೃದ್ಧಿ ಪಡಿಸುವ ಅವಕಾಶವಿತ್ತು. ಹಾಗಾಗಿ ಪಂಚಾಯ್ತಿ ಪ್ರಮುಖರ ಜತೆ ಸಭೆ ಮಾಡಿ 9 ಲಕ್ಷದ ಯೋಜನೆ ಸಿದ್ಧಪಡಿಸಲಾಯಿತು. ಈ ಪೈಕಿ ಕೆರೆ ಉಳೆತ್ತಿ ಸ್ವಚ್ಛಗೊಳಿಸಲು 3 ಲಕ್ಷ ರೂ, ಕಲ್ಯಾಣಿ ಸುತ್ತಲು ಸೋಪಾನ್ ಕಟ್ಟೆ ನಿರ್ಮಾಣಕ್ಕೆ 3 ಲಕ್ಷ ರೂ ಹಾಗೂ ಸುತ್ತಲು ತಂತಿ ಬೇಲಿ ಹಾಕಲು 3 ಲಕ್ಷ ರೂ. ನಿಗಧಿಪಡಿಸಲಾಯಿತು. ಯೋಜನೆಯಂತೆ ಕಾಮಗಾರಿ ಆರಂಭಿಸಲಾಯಿತು. ಆರಂಭದಲ್ಲಿ ಆಮೆ ಗತಿಯಲ್ಲಿ ಸಾಗುತ್ತಿತ್ತು. ಯಾವಾಗ ಕಲ್ಯಾಣಿ ಇರುವಿಕೆ ಗೋಚರಿಸಿತೋ ಆಗ ಉತ್ಸಾಹ ಮೂಡಿತು. ಜತೆಗೆ ಕೆಲದಿನಗಳ ಬಳಿಕ ಮಳೆ ಬಂದು ಕೆರೆಯಲ್ಲಿ ನೀರು ತುಂಬಲು ಆರಂಭಿಸಿತು. ಆಗಲೇ ಕಲ್ಯಾಣಿಯಲ್ಲಿ ಸಹ ನೀರು ಉಕ್ಕಲು ಆರಂಭಿಸಿತು. ಇದು ಎಲ್ಲರಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಆ ಮೂಲಕ ಯೋಜನೆ ಯಶಸ್ವಿಯಾಗಿ ಕಾರ್ಯಗತವಾಯಿತು ಎಂದರು. ಇದೀಗ ಕೆರೆ ಅಭಿವೃದ್ಧಿ ಜತೆಗೆ ಪುರಾತನ ಕಾಲದ ಕಲ್ಯಾಣಿ ಪತ್ತೆಯಾಗಿರುವುದು ಸಂತಸ ತಂದಿದೆ. ನೂರಾರು ವರ್ಷಗಳ ಹಿಂದಿನ ಕೊಂಡಿಯೊಂದನ್ನು ಮತ್ತೆ ಪತ್ತೆ ಹಚ್ಚಿರುವುದು ಸಾರ್ಥಕತೆ ಮೂಡಿಸಿದೆ. ಎಲ್ಲರ ಪರಿಶ್ರಮದಿಂದ ಕಳೆದು ಹೋಗಿದ್ದ ಒಂದು ಸುಂದರ ಕಲ್ಯಾಣಿ ಮತ್ತೆ ಸಿಕ್ಕಿದೆ. ಪ್ರತೀ ಹಂತದಲ್ಲೂ ಪ್ರೊತ್ಸಾಹಿಸಿ ನನಗೆ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭಾ ದಿನೇಶ್ ಹೇಳಿದರು. : ---.----- … 400-- , 23, 2021 (..): 400-- . , (), . , . , . ., , “ 25- , . . , . , . . , ‘ .’ . , . 9 . . 3 , . 3 . 3 .” “ . , ’ . , . . , . , ,” .“ , . . . ,” .: / / 400-- / / /