ಇಂದು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಿರುವ ಸಿಎಂ ಬೊಮ್ಮಾಯಿ. ಬೆಳಗಾವಿ.ಅಕ್ಟೋಬರ್,23,2021(..):ಇಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮವಾಗಿದ್ದು ಇಂದು ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇನ್ನು ಈ ಉತ್ಸವಕ್ಕೆ ಸಿಎಂ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಇದೆ. ಹೀಗಾಗಿ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದು, ಈ ಮೂಲಕ ಮೌಢ್ಯ ನಿವಾರಣೆಗೆ ಮುಂದಾಗಿದ್ದಾರೆ. 1997ರಲ್ಲಿ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದ ಅಂದಿನ ಸಿಎಂ ಜೆ.ಹೆಚ್.ಪಟೇಲ್ ಬಳಿಕ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಯಾರು ಸಹ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲು ಬಂದಿರಲಿಲ್ಲ. 2012ರ ಅಕ್ಟೋಬರ್ 25ರಂದು ಕಿತ್ತೂರು ಉತ್ಸವ ಸಮಾರೋಪ ಸಮಾರಂಭಕ್ಕೆ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಹಾಗೆಯೇ ಸಿಎಂ ಆಗಿದ್ದಾಗ ಬಿ.ಎಸ್.ಯಡಿಯೂರಪ್ಪ ಕಿತ್ತೂರು ಉತ್ಸವಕ್ಕೆ ಬಂದರೂ ಹೆದ್ದಾರಿ ಬದಿಯ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂಜೆ ನಡೆಯುವ ಉತ್ಸವಕ್ಕೆ ಬಾರದೇ ತೆರಳಿದರು. … , 23, 2021 (..): . 7.00 . . , . .. 1997. ’ . 2012 . .. , .: / / / : - --