ಹೆಚ್ ಡಿಡಿ ಮತ್ತು ಹೆಚ್.ಡಿಕೆ ಅವರ ಜತೆ ಚರ್ಚೆ ಮುಗಿದಿದೆ: ಅ.25ರ ನಂತರ ನನ್ನ ನಿರ್ಧಾರ- ಜೆಡಿಎಸ್ ಶಾಸಕ. ತುಮಕೂರು,ಅಕ್ಟೋಬರ್,23,2021(..):ಈಗಾಗಲೇ ಹೆಚ್.ಡಿ ದೇವೇಗೌಡರು ಹೆಚ್.ಡಿ ಕುಮಾರಸ್ವಾಮಿ ಜತೆ ಚರ್ಚೆ ಮುಗಿದಿದೆ. ವೈಯಕ್ತಿಕವಾಗಿ ಮಾತನಾಡುವುದು ಮುಗಿದು ಹೋಗಿದೆ. ಅ.25ರ ನಂತರ ನನ್ನ ನಿರ್ಧಾರ ಏನೆಂದು ತಿಳಿಸುತ್ತೇನೆ. ಕಾರ್ಯಕರ್ತರು, ಬೆಂಬಲಿಗರ ಸಭೆ ಬಳಿಕ ನಿರ್ಧಾರ ತಿಳಿಸುತ್ತೇನೆ ಎಂದು ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದ್ದಾರೆ. ಮಾಧ್ಯಗಳ ಜತೆ ಇಂದು ಮಾತನಾಡಿದ ಶಾಸಕ ಎಸ್.ಆರ್ ಶ್ರೀನಿವಾಸ್, ನಾನು ಜೆಡಿಎಸ್ ನಲ್ಲೇ ಇರಬೇಕೆಂದು ಅಂದುಕೊಂಡಿದ್ದೆ. ಆದರೆ ಅವರು ಆ ಹಂತ ಮೀರಿ ಮುಂದೆ ಹೋಗಿದ್ದಾರೆ. ಇದೆಲ್ಲಾ ನಾವಾಗಿ ಮಾಡಿಕೊಂಡಿರುವುದಲ್ಲ. ನಾನು ಮುಕ್ತವಾಗಿದ್ದೆ, ಯಾವಾಗ ಕರೆದರು ನಾನು ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ಗುಬ್ಬಿಯಲ್ಲಿ ನಡೆಯುವ ಕಾರ್ಯಕ್ರಮ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹೋಗಲ್ಲ, ನಮ್ಮ ಕಾರ್ಯಕರ್ತರೂ ಹೋಗಲ್ಲ. ಯಾವ ವರಿಷ್ಠರು ಬರುತ್ತಾರೆ ಅನ್ನೋದು ಮುಖ್ಯವಲ್ಲ. ನಮಗೂ ಆತ್ಮಗೌರವ, ಸ್ವಾಭಿಮಾನ ಅನ್ನೋದು ಇದೆ. ಸ್ವಾಭಿಮಾನ ಮಾರಿಕೊಂಡು ಪಕ್ಷದಲ್ಲಿರಬೇಕು ಅಂತಿಲ್ಲ ಯಾರು ಬಂದ್ರು ಅಷ್ಟೇ, ಅವರ ನಡವಳಿಕೆ ಸರಿ ಇರಬೇಕು. ಅವರೊಬ್ಬರಿಗೆ ಗೌರವ ಅಲ್ಲ, ಎಲ್ಲರಿಗೂ ಗೌರವ ಇರುತ್ತೆ ಎಂದು ಶಾಸಕ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. : – - - - -25th- - … : . 25- , 23, 2021 (..): .. .. .. , 25.“ . ,” . . “ . . - . . ,” .“ ’ . ’ , ’ . . -. ’ -. , ,” .: .. / /