ಐಪಿಎಲ್ ಪ್ರಸಾರ ಹಕ್ಕಿನಿಂದ ಬಿಸಿಸಿಐಗೆ ಭರ್ಜರಿ ಆದಾಯ ! ಅದೂ ಬರೋಬ್ಬರಿ 37,500 ಕೋಟಿ ರೂ. ಬೆಂಗಳೂರು, ಅಕ್ಟೋಬರ್ 22, 2021 (..):ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಿನ ಐದು ವರ್ಷಗಳ (2023-2027) ಅವಧಿಯಲ್ಲಿ ಐದು ಬಿಲಿಯ ಡಾಲರ್ (ಸುಮಾರು 37,500 ಕೋಟಿ ರೂಪಾಯಿ)ನಷ್ಟು ಬೃಹತ್ ಮೊತ್ತವನ್ನು ಗಳಿಸಲಿದೆ. ಐಪಿಎಲ್‌ನ ಹಾಲಿ 5 ವರ್ಷಗಳ ಪ್ರಸಾರ ಹಕ್ಕನ್ನು (2018-2022 ಅವಧಿಯ ಟಿವಿ ಮತ್ತು ಡಿಜಿಟಲ್ ಪ್ರಸಾರ) ಸ್ಟಾರ್ ಇಂಡಿಯಾ ಹೊಂದಿದೆ. ಈ ಹಕ್ಕನ್ನು ಸ್ಟಾರ್ ಇಂಡಿಯಾವು 2.55 ಬಿಲಿಯ ಡಾಲರ್ (ಸುಮಾರು 16,350 ಕೋಟಿ ರೂಪಾಯಿ)ಗೆ ಪಡೆದುಕೊಂಡಿದೆ. ಮುಂದಿನ ಐದು ವರ್ಷಗಳ ಅವಧಿಗೆ ವೌಲ್ಯವು ದ್ವಿಗುಣಕ್ಕಿಂತಲೂ ಜಾಸ್ತಿಯಾಗಬಹುದು ಎನ್ನಲಾಗಿದೆ.