ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ ಮತ್ತು ತಂದೆಯ ಜೊತೆಗಿದ್ಧ ಮಹಿಳೆಯ ಬರ್ಬರ ಹತ್ಯೆ. ಮೈಸೂರು,ಅಕ್ಟೋಬರ್,22,2021(..):ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದ್ದು ಮಗನೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನ ಬರ್ಬರ ಹತ್ಯೆ ಮಾಡಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮೈಸೂರಿನ ಶ್ರೀ ನಗರದಲ್ಲಿ ಈ ಘಟನೆ ನಡೆದಿದೆ. ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾದವರು. ಕೊಲೆ ಮಾಡಿದ ಸಾಗರ್ ನಾಪತ್ತೆ ಯಾಗಿದ್ದಾನೆ. ಶಿವಪ್ರಕಾಶ್ ಕೆ.ಜಿ ಕೊಪ್ಪಲು ನಿವಾಸಿಯಾಗಿದ್ದು, ಲತಾ ಮೈಸೂರಿನ ಶ್ರೀನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಲತಾ ಮನೆಗೆ ನುಗ್ಗಿದ ಸಾಗರ್ ಮೊದಲು ತಂದೆಯನ್ನ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದು, ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನಿಗೂ ಸಾಗರ್ ಮಚ್ಚಿನಿಂದ ಹಲ್ಲೆಗೈದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆ ದಾಖಲು ಮಾಡಲಾಗಿದೆ. ಈ ಕುರಿತು ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – -- …. : , 22, 2021 (..): . . , . , . (56) (48). . .. . ’ . . , . . . .: / / /