ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ. ಬೆಂಗಳೂರು,ಅಕ್ಟೋಬರ್,20,2021(..):ಕರ್ನಾಟಕ ಮಾಧ್ಯಮ ಅಕಾಡೆಮಿಯು 2019, 2020 ಮತ್ತು 2021ನೇ ಸಾಲಿನ ಮೂರು ವರ್ಷಗಳ ದತ್ತಿನಿಧಿ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನ “ಅಭಿಮಾನಿ ಪ್ರಕಾಶನ ಸಂಸ್ಥೆಯ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ತಲಾ ಹತ್ತು ಸಾವಿರ ರೂಗಳ ನಗದು ಪ್ರಶಸ್ತಿ ನೀಡಲು ಸಂಸ್ಥೆಗಳು ಒಂದು ಲಕ್ಷ ರೂಗಳ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ. 2019 ಜನವರಿ ಪ್ರಾರಂಭದಿಂದ ಡಿಸೆಂಬರ್-2019 ಅಂತ್ಯದವರೆಗೆ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿನಿಧಿಸುವ ಲೇಖನ ವರದಿ ಆಭಿಮಾನಿ ಪ್ರಶಸ್ತಿ-2019 ಎಂದು ದಾಖಲಿಸಿ ಹಾಗೂ 2020-ಜನವರಿ ಪ್ರಾರಂಭದಿಂದ ಡಿಸೆಂಬರ್-2020 ರ ಅಂತ್ಯದ ವರೆಗೆ “ಅಭಿಮಾನಿ ಪ್ರಶಸ್ತಿ-2020 ಎಂದು 2021 ಜನವರಿ ಪ್ರಾರಂಭದಿಂದ ಸೆಪ್ಟೆಂಬರ್-2021 ರ ಅಂತ್ಯದವರೆಗೆ ಅಭಿಮಾನಿ ಪ್ರಶಸ್ತಿ” 2021 ಎಂದು ದಾಖಲಿಸಿ ಅಯಾ ವರ್ಷದ ಲೇಖನಗಳನ್ನು ಹಾಗೂ ಇದೇ ಅವಧಿಯ ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಮೈಸೂರು ದಿಗಂತ ಪ್ರಶಸ್ತಿ-2019, 2020 ಹಾಗೂ 2021 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು. ಕನ್ನಡ ದೈನಿಕ -ಟಿವಿ-ವಾಹಿನಿ. ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರ್ತಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಲೇಖನ-ವರದಿಗಳನ್ನು ನವೆಂಬರ್ -23ರ ಒಳಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ “ಅಭಿಮಾನಿ ಪ್ರಶಸ್ತಿ-2019, 2020 2021 ಹಾಗೂ ಮೈಸೂರು ದಿಗಂತ ಪ್ರಶಸ್ತಿ-2019, 2020 ಮತ್ತು 2021 ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರಿಗೆ ಕಳುಹಿಸಲು ಆಕಾಡೆಮಿಯ ಅಧ್ಯಕ್ಷ ಕೆ. ಸದಾಶಿವ ಶೆಣೈ ಅವರು ಕೋರಿದ್ದಾರೆ. : – - … , 20, 2021 (..): , .., 2019, 2020, 2021, . , , . . . 10,000 - - . 2019 2019 ‘ -2019’, 2020 2020 2021 2021 ‘ -2020 ‘ -2021’ . , . , , . ’ , . , 23.. , , ‘ , , . .. , - 560 001’ .: / / / /