ನಳೀನ್ ಕುಮಾರ್ ಕಟೀಲ್, ಅವಿವೇಕಿ, ತಲೆಕೆಟ್ಟಿದೆ- ದಿನೇಶ್ ಗುಂಡೂರಾವ್ ಹಿಗ್ಗಾಮುಗ್ಗಾ ವಾಗ್ದಾಳಿ ಬೆಂಗಳೂರು,ಅಕ್ಟೋಬರ್,19,2021(..):ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬ ವರದಿ ಇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ನಳೀನ್ ಕುಮಾರ್ ಕಟೀಲ್ ಅವಿವೇಕಿ ಅವರಿಗೆ ತಲೆಕೆಟ್ಟಿದೆ. ಅವಿವೇಕಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮೊದಲು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ನಳೀನ್ ಕುಮಾರ್ ಕಟೀಲ್ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರ ಮನಸ್ಸು ಎಷ್ಟು ಕೊಳಕಾಗಿದೆ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ. ಅವಿವೇಕಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು. +. ನಳೀನ್ ಕಟೀಲ್ ಅವರಿಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಕಟೀಲು, ಯತ್ನಾಳ್, ಸಿ.ಟಿ.ರವಿ, ಹೆಗಡೆ ಇವರೆಲ್ಲ ಬಿಜೆಪಿ ಹೀರೋಗಳು. ಇವರು ಆಡುವ ಮಾತು, ಬಳಸುವ ಭಾಷೆ ಎಂಥಾದ್ದು ಎಂಬುದು ಜಗಜ್ಜಾಹೀರಾಗುತ್ತಿದೆ. ಇಂಥವರನ್ನೆಲ್ಲ ಬೆಂಬಲಿಸುವವರೇ ನರೇಂದ್ರ ಮೋದಿಯಂಥವರು ಎಂದು ಟೀಕಿಸಿದರು. : -- - -