ಅ.24ರಿಂದ ಒಂದು ವಾರಗಳ ಕಾಲ`ಕನ್ನಡಕ್ಕಾಗಿ ನಾವು’ ಅಭಿಯಾನ- ಸಚಿವ ಸುನೀಲ್ ಕುಮಾರ್ ಬೆಂಗಳೂರು,ಅಕ್ಟೋಬರ್,19,2021(..):ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಹಿನ್ನೆಲೆಯಲ್ಲಿ ಈ ಬಾರಿ ಅಕ್ಟೋಬರ್ 24 ರಿಂದ ಒಂದು ವಾರಗಳ ಕಾಲ ಕನ್ನಡಕ್ಕಾಗಿ ನಾವು ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದರು. ಈ ಕುರಿತು ಇಂದು ಮಾತನಾಡಿ ಮಾಹಿತಿ ನೀಡಿದ ಸಚಿವ ಸುನೀಲ್ ಕುಮಾರ್, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಈ ಬಾರಿ ಒಂದು ವಾರ ನಡೆಯಲಿದೆ. ಅಕ್ಟೋಬರ್ 24ರಿಂದ ಅ.30ರವರೆಗೆ `ಕನ್ನಡಕ್ಕಾಗಿ ನಾವು’ ಅಭಿಯಾನ ನಡೆಯಲಿದೆ ಎಂದು ಹೇಳಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 4,500 ಅರ್ಜಿ ಸಲ್ಲಿಕೆಯಾಗಿದ್ದು, ಅಕ್ಟೋಬರ್ 28 ಅಥವಾ 29 ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು. ರಾಜ್ಯಕ್ಕೆ ಬಂದಿರುವ ಹೊರ ರಾಜ್ಯದವರು 100 ಪದ ಕನ್ನಡ ಬಳಸುವಂತೆ ಮನವಿ ಮಾಡಿದ್ದು, ಅ. 28 ರಂದು ಕನಿಷ್ಟ ಮೂರು ಕನ್ನಡ ಗೀತೆಯನ್ನು ಲಕ್ಷ ಕಂಠಗಳಲ್ಲಿ ಒಂದು ಸಾವಿರ ಕಡೆಗಳಲ್ಲಿ ಸಾಮೂಹಿಕ ಗಾಯ ನಡೆಸಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು. : – - -24th– - … ‘ ’ . 24: , 19, 2021 (..): - ‘ ’ ( ) 24, 1. , 24 30. “ , 4,500 . 28 29,” . . “ , 28,” .: / / / / 24/