ಮದುವೆಗೂ ಮುಂಚೆ ಜಾತಕ ಹೊಂದಾಣಿಕೆಗಿಂತ ʼ ಸಿಕಲ್ ಸೆಲ್ ಕಾರ್ಡ್‌ ʼ ಹೊಂದಾಣಿಕೆಯೇ ಮುಖ್ಯ..! 40 . - . ಮೈಸೂರು, ಜೂ.19,2024: (..) ರೋಗ ನಿಯಂತ್ರಣಕ್ಕಿಂತ ರೋಗ ತಡೆಗಟ್ಟುವಿಕೆಯೇ ಮುಖ್ಯವಾದದ್ದು ಎಂಬುದನ್ನು ಮನಗಂಡಿರುವ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ, ಈ ನಿಟ್ಟಿನಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ತಡೆಗೆ ʼ ಸಿಕಲ್‌ ಸೆಲ್‌ ಅನೀಮಿಯಾ ಕಾರ್ಡ್‌ ʼ (- ) ವಿತರಣೆಗೆ ಮುಂದಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ. ಈ ಕಾರ್ಡ್ ಮಾರ್ಗದರ್ಶಕವಾಗಿ, ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಚಿಕಿತ್ಸಾ ಸೇವೆಗಳು, ಔಷಧ ಪೂರೈಕೆ, ನಿಯಮಿತ ತಪಾಸಣೆಗಳು ಮತ್ತು ಸಮುದಾಯಮಟ್ಟದಲ್ಲಿ ಶಿಕ್ಷಣ ಕಾರ್ಯಗಳು ನೀಡಲಾಗುತ್ತದೆ. ಈ ಬಗ್ಗೆ ಆರೋಗ್ಯ ಮತ್ತು ಕುಂಟುoಬ ಕಲ್ಯಾಣ ಸೇವೆಗಳ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್ ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿದರು. ಸಿಕ್ಕಿಲ್ ಸೆಲ್ ಅನೀಮಿಯಾದವರು ತಕ್ಷಣ ಚಿಕಿತ್ಸೆ ಪಡೆಯಲು ಈ ಕಾರ್ಡ್ ಸಹಾಯ ಮಾಡುತ್ತದೆ. ಈ ಕಾರ್ಡ್ ಮೂಲಕ ರೋಗಿಗಳ ವಿವರಗಳನ್ನು ಸರಕಾರ ಇತ್ಯರ್ಥವಾಗಿ ಶ್ರೇಣೀಕರಿಸಲು ಸಾಧ್ಯ, ಇದು ಉತ್ತಮ ಯೋಜನೆ ಮತ್ತು ಕಾರ್ಯೋನ್ಮುಖತೆಗೆ ಸಹಕಾರಿಯಾಗುತ್ತದೆ. ಸಮುದಾಯ ಜಾಗೃತಿ: ಸಾಮಾನ್ಯ ಜನರಲ್ಲಿ ಸಿಕ್ಕಿಲ್ ಸೆಲ್ ಅನೀಮಿಯಾ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಹಾಯಕ. ಈ ರೋಗ ಲಕ್ಷಣಗಳು ಸಾಮಾನ್ಯವಾಗಿ ಬುಡಕಟ್ಟು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ರಾಜ್ಯದಲ್ಲಿನ ಬುಡಗಟ್ಟು ಜನಾಂಗದವರಿಗೆ ಈ ಕಾರ್ಡ್‌ ಗಳನ್ನು ವಿತರಿಸಲಾಗುತ್ತಿದೆ. ಈ ತನಕ ಒಂದು ಸಾವಿರಕ್ಕೂ ಅಧಿಕ ಕಾರ್ಡ್‌ ಗಳನ್ನು ವಿತರಿಸಲಾಗಿದೆ. ಬುಡಕಟ್ಟು ಜನಾಂಗದ ಬಹುತೇಕರು ಅವಿದ್ಯಾವಂತರು. ರಕ್ತ ಸಂಬಂಧದಲ್ಲೇ ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ, ಈ ರೋಗ ಲಕ್ಷಣ ವಂಶಪರಾಂಪರ್ಯವಾಗಿ ಹರಡುತ್ತಲೇ ಇದೆ. ಆದ್ದರಿಂದ ಸಿಕಲ್‌ ಸೆಲ್‌ ಕಾರ್ಡ್‌ ಗಳನ್ನು ನೀಡುವ ಮೂಲಕ ಮದುವೆ ಸಂದರ್ಭದಲ್ಲಿ ಅವರೇ ಖುದ್ದು ಪರಿಶೀಲಿಸಿಕೊಳ್ಳಬಹುದು. ಮದುವೆಯಾಗುವ ಹುಡುಗ ಹಾಗೂ ಹುಡುಗಿಯ ಕಾರ್ಡ್‌ ಗಳನ್ನು ಒವರ್‌ ಲ್ಯಾಪ್‌ ಮಾಡುವ ಮೂಲಕ “ ಕಲರ್‌ ಕೋಡಿಂಗ್‌ “ ನ ಫಲಿತಾಂಶದ ಮೇಲೆ ಮದುವೆಯಾದ್ರೆ ಸಿಕಿಲ್‌ ಸೆಲ್‌ ಅನಿಮೀಯಾ ಬರುವ ಸಾಧ್ಯತೆಯ ಪ್ರಮಾಣ ಎಷ್ಟು ಎಂಬುದನ್ನು ತಿಳಿದುಕೊಂಡು ಆನಂತರ ಮದುವೆ ಮಾಡಬೇಕೆ..? ಅಥವಾ ಬೇಡವೇ..? ಎಂಬುದನ್ನು ನಿರ್ಧರಿಸಬಹುದು . ಸರಕಾರಿ ಯೋಜನೆಗಳ ಲಾಭಗಳನ್ನು ಪಡಿಸಿಕೊಳ್ಳಲು ಈ ಕಾರ್ಡ್ ಅತೀ ಮುಖ್ಯವಾಗುತ್ತದೆ. ಇದರ ಮೂಲಕ ಸಿಕ್ಕಿಲ್ ಸೆಲ್ ಅನೀಮಿಯಾ ಪೀಡಿತರ ಆರೋಗ್ಯದ ಸ್ಥಿತಿ ಸುಧಾರಿಸುತ್ತಿದ್ದು, ಉತ್ತಮ ಗುಣಮಟ್ಟದ ಬದುಕಿಗೆ ಸಹಾಯವಾಗುತ್ತದೆ. ಲಾಸ್ಟ್‌ ಪಂಚ್‌ ಲೈನ್‌ : ಇದೊಂದು ಅನುವಂಶಿಕ ಕಾಯಿಲೆ. ಈ ರೋಗವು ಆದಿವಾಸಿಗಳಲ್ಲಿ ಸಾಮಾನ್ಯವಾಗಿದೆ. ದೇಶದಲ್ಲಿ ಸುಮಾರು 200 ಜಿಲ್ಲೆಗಳಲ್ಲಿ ರೋಗ ಹರಡಿದೆ–ಹೆಚ್ಚಾಗಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಕಂಡು ಬಂದಿದೆ. “2047 ರ ವೇಳೆಗೆ ಈ ರೋಗವನ್ನು ತೊಡೆದುಹಾಕುವ ಗುರಿ ಹೊಂದಲಾಗಿದೆ. ಇದು ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ. ವಂಶಪರಾಂಪರ್ಯವಾಗಿ ಹರಡುವುದರಿಂದ, ನಿರಂತರ ತಪಾಸಣೆ ಪ್ರಯತ್ನದ ಮೂಲಕ ತಡೆಗಟ್ಟುವಿಕೆ ಸಾಧ್ಯವಾಗುತ್ತದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಬುಡಕಟ್ಟು ಜನಾಂಗದವರಿಗೆ ಕಲರ್‌ -ಕೋಡೆಡ್ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಮದುವೆ ಮಾತುಕತೆ ವೇಳೆ ಎರಡು ಕಾರ್ಡ್‌ಗಳನ್ನು ಹೊಂದಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು. : ‘ ’ , , , . : 40 . - . . . “ 2047. , . - 40 . , .