ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲೆಂದು ಅಭಿಮಾನಿಯಿಂದ ಹರಕೆ. ರಾಯಚೂರು,ಅಕ್ಟೋಬರ್,16,2021(..):ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಅವರ ಅಭಿಮಾನಿಯೊಬ್ಬರು ಹರಕೆ ಹೊತ್ತಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ನಡೆದ ದುರ್ಗಾದೇವಿ ರಥೋತ್ಸವದಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಬಾಳೆಹಣ್ಣಿನ ಮೇಲೆ ಸಿದ್ದರಾಮಯ್ಯ ಎಂದು ಬರೆದು ಬಾಳೆಹಣ್ಣನ್ನು ದುರ್ಗಾದೇವಿ ರಥೋತ್ಸವಕ್ಕೆ ಎಸೆಯುವ ಮೂಲಕ ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದ್ದು, ಈ ವೇಳೆ ಹಸಮಕಲ್ ಗ್ರಾಮದಲ್ಲಿ ಅಭಿಮಾನಿಯೊಬ್ಬರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದಿರುವ ಫೋಟೋ ವೈರಲ್ ಆಗಿದೆ. : - - - --