ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪೂಜಾವಿಧಿವಿಧಾನ ನೆರವೇರಿಸಿದ ಯದುವೀರ್. ಮೈಸೂರು,ಅಕ್ಟೋಬರ್,14,2021(..):ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು ಮೈಸೂರು ಅರಮನೆಯಲ್ಲಿ ಇಂದು ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಲ್ಯಾಣ ಮಂಟಪದಲ್ಲಿ ಕತ್ತಿ ಗುರಾಣಿ ಸೇರಿದಂತೆ ರಾಜಮನೆತನದ ಆಯುಧಗಳಿಗೆ ಸಾಂಪ್ರದಾಯಕ ಪೂಜೆ ಸಲ್ಲಿಕೆ ಮಾಡಿದರು. ಇದಾದ ಬಳಿಕ ಸವಾರಿತೊಟ್ಟಿಯಲ್ಲಿ ಪಟ್ಟದ ಆನೆ, ಕುದುರೆ, ಹಸು, ಒಂಟೆಗಳಿಗೆ ಪೂಜೆ ಸಲ್ಲಿಸಲಾಯಿತು. ಹಾಗೆಯೇ ಅರಮನೆ ಮುಂಭಾಗ ಫಿರಂಗಿ ಗಾಡಿಗಳಿಗೂ ಪೊಜೆ ಸಲ್ಲಿಸಲಾಯಿತು. ಈ ವೇಳೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಯದುವೀರ್ ಪುತ್ರ ಆದ್ಯವೀರ್, ತ್ರಿಶಿಕಾ ದೇವಿ ಒಡೆಯರ್ ಅವರು ಆಯುಧಾ ಪೂಜಾ ಸಂಭ್ರಮ ವೀಕ್ಷಣೆ ಮಾಡಿದರು. : - -