ಕೋಟಿಗೊಬ್ಬ-3 ಬಿಡುಗಡೆಯಾಗದ ಹಿನ್ನೆಲೆ: ಚಿತ್ರಮಂದಿರದ ಮೇಲೆ ಅಭಿಮಾನಿಗಳಿಂದ ಕಲ್ಲು ತೂರಾಟ. ವಿಜಯಪುರ,ಅಕ್ಟೋಬರ್,14,2021(..): ಇಂದು ಬಿಡುಗಡೆಯಾಗಬೇಕಿದ್ದ ನಟ ಕಿಚ್ಚ ಸುದೀಪ್ ಅವರ ಅಭಿನಯದ ಕೋಟಿಗೊಬ್ಬ-3 ರಿಲೀಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶೋ ರದ್ದಾಗಿದ್ದರಿಂದಾಗಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ಅಭಿಮಾನಿಗಳು ಪ್ಲೆಕ್ಸ್ ಹರಿದು ಚಿತ್ರಮಂದಿರಗಳ ಮೇಲೂ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ವಿಜಯಪುರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರಕ್ಕೆ ನಟ ಸುದೀಪ್ ಅಭಿಮಾನಿಗಳ ದಂಡೇ ಆಗಮಿಸಿತ್ತು. ಕೋಟಿಗೊಬ್ಬ-3 ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಟಿಕೆಟ್ ಕೂಡ ನೀಡಲಾಗಿತ್ತು. ಆದರೆ ನಿರೀಕ್ಷೆಯಂತೆ ಕೋಟಿಗೊಬ್ಬ-3 ಚಿತ್ರ ಇಂದು ಬಿಡುಗಡೆಯಾಗಿಲ್ಲ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಕಲ್ಲು ತೂರಾಟ ನಡೆಸಿ ದಾಂದಲೆ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರಮಂದಿರಗಳ ಮುಂದೆ ಹಾಕಿದ್ದಂತ ಫ್ಲೆಕ್ಸ್ ಹರಿದು ಹಾಕಿದ್ದಲ್ಲದೇ, ಕೋಟಿಗೊಬ್ಬ-3 ಚಿತ್ರ ಬಿಡುಗಡೆ ಆಗದೇ ಇದ್ದರಿಂದಾಗಿ ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ಕೂಡ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ದಾಂದಲೆ ನಡೆಸುತ್ತಿದ್ದ ಹುಡಗರನ್ನ ಲಾಠಿ ಚಾರ್ಜ್ ಮಾಡಿ ಚದುರಿಸಿದರು. : -3- - - – –