ಡಿಕೆಶಿ ಬಗ್ಗೆ ಮಾತನಾಡಿದ್ಧ ವಿ.ಎಸ್ ಉಗ್ರಪ್ಪಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಿಂದ ನೋಟಿಸ್. ಬೆಂಗಳೂರು,ಅಕ್ಟೋಬರ್,13,2021(..):ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಗ್ಗೆ ಸ್ಪೋಟಕ ಮಾತು ಕುರಿತು ಮಾಜಿ ಸಂಸದ ವಿ.ಎಸ್ ಉಗ್ರಪ್ಪಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ನೋಟಿಸ್ ನೀಡಿದೆ. ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮನ್ ಖಾನ್ ಅವರು ವಿ.ಎಸ್ ಉಗ್ರಪ್ಪಗೆ ನೊಟೀಸ್ ನೀಡಿದ್ದಾರೆ. ಅಶಿಸ್ತಿನ ನಡವಳಿಕೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕಮಿಷನ್ ಗಿರಾಕಿ, ದೊಡ್ಡ ಸ್ಕ್ಯಾಮ್ ಎಂದು ಕಾಂಗ್ರೆಸ್​ ಮುಖಂಡರಾದ ಸಲೀಂ ಮತ್ತು ವಿ.ಎಸ್. ಉಗ್ರಪ್ಪ ನಡುವಣ ಸ್ಫೋಟಕ ಮಾತುಗಳು ಬಹಿರಂಗವಾಗಿತ್ತು. ಈಗಾಗಲೇ ಸಲೀಂಗೆ ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಗೇಟ್​ ಪಾಸ್ ನೀಡಲಾಗಿದೆ. ಇನ್ನು ಸಂಭಾಷಣೆ ವೇಳೆ ಮೌನವಾಗಿ ಮಾತುಗಳನ್ನು ಆಲಿಸಿದ ಉಗ್ರಪ್ಪಗೆ ಇದೀಗ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯಿಂದ ನೋಟಿಸ್ ಜಾರಿಯಾಗಿದೆ. : – –