ಮೈತ್ರಿ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದ ಹೆಚ್.ಡಿಕೆಗೆ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು. ಮೈಸೂರು,ಅಕ್ಟೋಬರ್,12,2021(..):ಹಿಂದಿನ ಮೈತ್ರಿ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದು ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ 17 ಶಾಸಕರನ್ನ ಕಳೆದುಕೊಳ್ಳಲು ಜೆಡಿಎಸ್ ಕಾರಣ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನಾವು 17 ಶಾಸಕರನ್ನ ಕಳೆದುಕೊಂಡವು ಎಂದು ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಯತೀಂದ್ರ ಸಿದ್ಧರಾಮಯ್ಯ, ನಮಗೆ 80 ಸ್ಥಾನ ಬಂದಿದ್ರೂ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದವು. ಆದ್ರೆ ಹೆಚ್.ಡಿ ಕುಮಾರಸ್ವಾಮಿ ನಮ್ಮ ಶಾಸಕರನ್ನ ಸರಿಯಾಗಿ ನೋಡಿಕೊಳ್ಳಲಿಲ್ಲ. ಸಿಎಂ ಸರಿಯಾಗಿ ಸಿಗ್ತಿಲ್ಲ ಎಂದು ಶಾಸಕರು ಕೈಬಿಟ್ಟು ಹೋದರು. ಜೆಡಿಎಸ್ ಜತೆ ಮೈತ್ರಿ ಆಗದಿದ್ರೆ ನಮ್ಮ ಶಾಸಕರು ನಮ್ಮ ಜತೆಯಲ್ಲೇ ಇರ್ತಿದ್ದರು ಎಂದು ಹೇಳಿದರು. : - - -