ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ಧ 7 ಮಕ್ಕಳ ಪೈಕಿ ಮೂವರು ಮಕ್ಕಳು ಪತ್ತೆ. ಬೆಂಗಳೂರು,ಅಕ್ಟೋಬರ್,11,2021(..):ಬೆಂಗಳೂರಿನಲ್ಲಿ ನಾಪತ್ತೆಯಾಗಿರುವ 7 ಮಕ್ಕಳ ಪೈಕಿ ಇದೀಗ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷಿತ್, ಕಿರಣ್ ನಂದನ್ ಪತ್ತೆಯಾಗಿರುವ ಮಕ್ಕಳು. ಶನಿವಾರ ಬೆಳಿಗ್ಗೆ ಜಾಗಿಂಗ್ ಹೋಗುವುದಾಗಿ ಹೇಳಿ 5.30ಕ್ಕೆ ಮನೆಯಿಂದ 7 ಮಕ್ಕಳು ಹೋಗಿ, ಆನಂತರ ನಾಪತ್ತೆಯಾಗಿದ್ದರು. ತಲಾ 1500 ರೂ ಹಣ ತೆಗೆದುಕೊಂಡು ಹೋಗಿದ್ದ ಈ ಮೂವರು ಮೊದಲು ಮಂಗಳೂರಿಗೆ ಹೋಗಲು ಬ್ಲಾನ್ ಮಾಡಿದ್ದರು. ಆದರೆ ಪ್ಲಾನ್ ಬದಲಾವಣೆ ಮಾಡಿ ಮೈಸೂರು ದಸರಾ ನೋಡಿಕೊಂಡು ನಿನ್ನೆ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಈ ನಡುವೆ ಬೆಳಿಗ್ಗೆ ಆನಂದ್ ರಾವ್ ಸರ್ಕಲ್ ನಲ್ಲಿ ಮೂವರು ಮಕ್ಕಳು ಪತ್ತೆಯಾಗಿದ್ದು, ಉಪ್ಪಾರ ಪೇಟೆ ಠಾಣಾ ಪೊಲೀಸರು ಅವರನ್ನ ರಕ್ಷಿಸಿದ್ದಾರೆ. ಇನ್ನೊಂದೆಡೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ನಮಗೆ ಓದೋದಕ್ಕೆ ಇಷ್ಟವಿಲ್ಲ. ಸ್ಪೋರ್ಟ್ ನಲ್ಲಿ ಇಷ್ಟ. ಅದರಲ್ಲೇ ಸಾಧನೆ ಮಾಡೋದಕ್ಕೆ ಮನೆ ಬಿಟ್ಟು ಹೋಗ್ತಾ ಇದ್ದೀವಿ ಎಂಬುದಾಗಿ ಪತ್ರ ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಅಮೃತವರ್ಷಿಣಿ, ಭೂಮಿ ಚಿಂತನ್, ರಾಯನ್ ನಾಪತ್ತೆಯಾಗಿದ್ದು ಇವರ ಪತ್ತೆಗಾಗಿ ಪೊಲೀಸರು ಹಡುಕಾಟ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ನಾಲ್ವರು ಕ್ರೀಡಾ ಸಾಮಾಗ್ರಿ, ನೀರಿನ ಬಾಟಲ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮಕ್ಕಳ ನಾಪತ್ತೆಯಿಂದ ಪೋಷಕರು ಕಂಗಾಲಾಗಿದ್ದಾರೆ. : - - – … 7 , 11,2021 (..): . , . , , . . 5.30 . . 1,500 . . , . , . . . , , , . . . .: / //