ಇ-ಕಾಮರ್ಸ್ ‘ಶಾಪಿಂಗ್ ಫೆಸ್ಟಿವಲ್’: ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ಬೆಂಗಳೂರು, ಅಕ್ಟೋಬರ್ 10, 2021 (..):ಅಮೆಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಭರ್ಜರಿ ವಹಿವಾಟು ನಡೆಸಿವೆ. ಹೌದು. ಬಿಗ್ ಬಿಲಿಯನ್ ಡೇ, ಶಾಪಿಂಗ್ ಫೆಸ್ಟಿವಲ್ ಮೂಲಕ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ. ಕಳೆದ ವರ್ಷದ ಹಬ್ಬದ ಮಾರಾಟ ಸಾಪ್ತಾಹದ ಮೊದಲ ಮೂರು ದಿನಗಳಲ್ಲೇ ಒಟ್ಟಾರೆ ಮಾರಾಟದ 63%ನಷ್ಟು ವಹಿವಾಟು ನಡೆದಿತ್ತು. ಈ ವರ್ಷದ ವೇಳೆ ಗುರಿ ಇಟ್ಟುಕೊಂಡಿರುವ ಮಾರಾಟದ 57%ನಷ್ಟು ವಹಿವಾಟು ಮೊದಲ ಮೂರು ದಿನಗಳಲ್ಲಿ ನಡೆದಿದೆ. ಕೋವಿಡ್ ಹೊಡೆತದ ಬಳಿಕ ಜನರು ಹೆಚ್ಚಾಗಿ ಖರೀದಿ ಮಾಡಲು ಆನ್ಲೈನ್ ಪ್ಲಾಟ್‌ಫಾರಂಗಳನ್ನೇ ಅವಲಂಬಿಸುತ್ತಿರುವ ಕಾರಣ ಈ ವರ್ಷ ಆನ್ಲೈನ್ ಮೂಲಕ ಒಟ್ಟಾರೆ $49-52 ಶತಕೋಟಿಯಷ್ಟು ವಹಿವಾಟು ನಡೆಯುವ ನಿರೀಕ್ಷೆಯಿದೆ. : - ‘ ’: $ 2.7