ದಸರಾ: ಈ ಬಾರಿಯ ಜಂಬೂ ಸವಾರಿ ಮಿಸ್ ಮಾಡಿಕೊಳ್ಳಲಿದ್ದಾನೆ ‘ವಿಕ್ರಮ’ ಮೈಸೂರು, ಅಕ್ಟೋಬರ್ 10, 2021 (..):ವಿಕ್ರಮ ಆನೆಗೆ ಮದವೇರಿದ್ದು, ಹೀಗಾಗಿ ಆ ಆನೆಯನ್ನು ದಸರಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಿಲ್ಲ. ಈ ಕುರಿತು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದು, ಈ ರೀತಿಯ ಸಮಸ್ಯೆ ಆಗುವ ಕಾರಣ ಮೂರು ಆನೆ ಹೆಚ್ಚುವರಿಯಾಗಿ ತಂದಿದ್ದೇವೆ ಎಂದು ಡಿಸಿಎಫ್ ತಿಳಿಸಿದ್ದಾರೆ. ಜಂಬೂಸವಾರಿಗೆ ಐದು ಆನೆಗಳು ಮಾತ್ರ ಸಾಕು. ಆದರೆ ನಾವು 8 ಆನೆಗಳು ತಂದಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಳ್ಳಲು ಕೊನೆ ಹಂತದಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ದಸರಾ ವೇಳೆ ಆನೆ ಅಭಿಮನ್ಯು ಅಕ್ಕಪಕ್ಕ ಎರಡು ಹೆಣ್ಣಾನೆಗಳು ಬಳಕೆ ಆಗುತ್ತವೆ. ನಿಶಾನೆ ಆನೆ, ನೌಪತ್ ಆನೆ ಸೇರಿ ಒಟ್ಟು 5 ಆನೆ ಜಂಬೂ ಸವಾರಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಕರಿಕಾಳನ್ ಮಾಹಿತಿ ನೀಡಿದ್ದಾರೆ. :