ಶ್ರೀರಂಗಪಟ್ಟಣ ದಸರಾ ವೇಳೆ ತಪ್ಪಿದ ದುರಂತ: ಪಟಾಕಿ, ವಾದ್ಯಗಳ ಸದ್ಧಿಗೆ ಬೆದರಿದ ಅಂಬಾರಿ ಹೊತ್ತಿದ್ಧ ಗೋಪಾಲಸ್ವಾಮಿ ಆನೆ. ಶ್ರೀರಂಗಪಟ್ಟಣ,ಅಕ್ಟೋಬರ್,9,2021(..):ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ದುರಂತವೊಂದು ತಪ್ಪಿದೆ . ಹೌದು ಅಂಬಾರಿ ಹೊತ್ತಿದ್ಧ ಗೋಪಾಲಸ್ವಾಮಿ ಆನೆ ಬೆದರಿ ಸ್ವಲ್ಪ ಕಾಲ ಗೊಂದಲ ಉಂಟಾದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆ ನಡೆಯುತ್ತಿತ್ತು. ಗೋಪಾಲಸ್ವಾಮಿ ಆನೆ ಅಂಬಾರಿ ಹೊತ್ತು ಸಾಗುತ್ತಿದ್ದ. ಈ ಮಧ್ಯೆ ವಾದ್ಯಗಳು ಮತ್ತು ಪಟಾಕಿ ಸದ್ಧಿಗೆ ಗೋಪಾಲಸ್ವಾಮಿ ಬೆದರಿದ್ದು ಗಾಬರಿಗೊಂಡು ಒಂದು ಸುತ್ತು ತಿರುಗಿದ್ದಾನೆ. ಈ ವೇಳೆ ಅಲ್ಲಿ ನೆರೆದಿದ್ದ ಜನರು ಅಲ್ಲಿಂದ ಓಡಿದ್ದಾರೆ. ಗೋಪಾಲಸ್ವಾಮಿ ಆನೆ ಬೆದರಿದ ಹಿನ್ನೆಲೆ ಜಂಬೂ ಸವಾರಿ ಮೆರವಣಿಗೆ ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಬೆಳ್ಳಿರಥದಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನ ಮೆರವಣಿಗೆ ಮಾಡಲಾಯಿತು. : - - –