ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ. ಮುಂಬೈ,ಅಕ್ಟೋಬರ್,8,2021(..):‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ಧ ಜಾಮೀನು ಅರ್ಜಿಯನ್ನ ಮುಂಬೈ ಸೆಷನ್ಸ್ ವಜಾಗೊಳಿಸಿದೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸೇರಿ 8 ಮಂದಿ ಆರೋಪಿಗಳು ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಮುಂಬೈ ಸೆಷನ್ಸ್ ಕೋರ್ಟ್ ಆರ್ಯನ್‌ ಖಾನ್‌ 8 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ. ನಿನ್ನೆಯಷ್ಟೇ ಆರ್ಯನ್‌ನ ಎನ್‌ಸಿಬಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮುಂಬೈನ ಕಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡೆಸಲಾಗಿತ್ತು. ನ್ಯಾಯಾಲಯ ಆರ್ಯನ್‌ ಸೇರಿ 7 ಆರೋಪಿಗಳನ್ನ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿತ್ತು. ಅರ್ಥರ್ ರೋಡ್ ಜೈಲಿಗೆ ಅರ್ಯನ್ ಖಾನ್ ಶಿಫ್ಟ್ ಮಾಡಲಾಗಿದೆ. : - - - – .