ಮೈಸೂರು ದಸರಾ: ಇಂದಿನಿಂದ ರಾತ್ರಿ 10.30ರವರೆಗೂ ಬೆಳಗಲಿವೆ ದೀಪಾಲಂಕಾರದ ವಿದ್ಯುತ್ ದೀಪಗಳು. ಮೈಸೂರು,ಅಕ್ಟೋಬರ್,9,2021(..):ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ನಗರದಲ್ಲಿ ಜಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಬರುವವರಿಗೆ ಸಿಹಿಸುದ್ದಿ ಸಿಕ್ಕಿದ್ದು ಇಂದಿನಿಂದ ರಾತ್ರಿ 10.30ರವರೆಗೂ ದೀಪಾಲಂಕಾರದ ವಿದ್ಯುತ್ ದೀಪಗಳು ಬೆಳಗಲಿವೆ. ದೀಪಾಲಂಕಾರ ನೋಡಲು ವೀಕ್ಷಕರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದೀಪಾಲಂಕಾರದ ಸಮಯ ವಿಸ್ತರಣೆ ಮಾಡಲಾಗಿದೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ವಿದ್ಯುತ್ ದೀಪಾಲಂಕಾರ ರಾತ್ರಿ 11 ಗಂಟೆವೆರೆಗೂ ಇರಲಿದೆ. ಪ್ರತಿ ವರ್ಷ ಸಂಜೆ 6.30 ರಿಂದ ರಾತ್ರಿ 8.30 ವರೆಗೆ ಮಾತ್ರ ಲೈಟ್ಸ್ ಆನ್ ಮಾಡಲುತ್ತಿತ್ತು. ಈ ಬಾರಿ ರಾತ್ರಿ 9.30 ವರೆಗೂ ದೀಪಾಲಂಕಾರ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಹಾಗಾಗಿ ದೀಪಾಲಂಕಾರದ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಯಿಂದ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪಾಲಂಕಾರ ವೀಕ್ಷಣೆ ಮಾಡಲು ಬರುವವರು ಇಂದಿನಿಂದ ಸಂಜೆ 6.30 ರಿಂದ ರಾತ್ರಿ 10.30 ರ ವರೆಗೂ ದಸರಾ ದೀಪಾಲಂಕಾರದ ಸೊಬಗು ಸವಿಯಬಹುದಾಗಿದೆ. : –-- - -10.30 . .. : 10.30 , 9, 2021 (..): . 10.30 . , . , 11.00 . 6.30 8.30 . 9.30 . , , .: / / /