ದರ್ಶನ್ ಕೇಸ್ ನಲ್ಲಿ ಬದಲಾವಣೆ ಮಾಡಿದ್ರೂ ತಪ್ಪಿಲ್ಲ: ಪ್ರಕರಣ ಯಾವುದೇ ಕಾರಣಕ್ಕೂ ಸಡಿಲ ಮಾಡಲ್ಲ- ಗೃಹ ಸಚಿವ ಪರಮೇಶ್ವರ್. ಬೆಂಗಳೂರು,ಜೂನ್,19,2024 (..):ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಸ್ ಪಿಪಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ಬದಲಾವಣೆ ಮಾಡಿದ್ರೂ ತಪ್ಪಿಲ್ಲ. ಪ್ರಕರಣವನ್ನ ಯಾವುದೇ ಕಾರಣಕ್ಕೂ ಸಡಿಲ ಮಾಡಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಿಎಂ ಅಥವಾ ನಾನಾಗಲಿ ಕಾನೂನು ಸಲಹೆ ಪಡೆದು ನಿರ್ಧಾರ ಮಾಡುತ್ತೇವೆ ಯಾವ ಕೇಸ್ ನಲ್ಲಿ ಯಾರನ್ನ ನೇಮಿಸಬೇಕು ಎಂದು ತೀರ್ಮಾನಿಸುತ್ತೇವೆ ಯಾರನ್ನೇ ನೇಮಿಸಿದರೂ ಕಾನೂನು ಪ್ರಕಾರವೇ ನಡೆಯಬೇಕು ಎಂದರು. ದರ್ಶನ್ ತಪ್ಪೊಪ್ಪಿಕೊಂಡಿರುವುದು ಗೊತ್ತಿಲ್ಲ. ನಾವು ಪ್ರಕರಣವನ್ನ ಯಾವುದೇ ಕಾರಣಕ್ಕೂ ಸಡಿಲ ಮಾಡಲ್ಲ. ಅಂತಹ ಚಿಂತನೆ ಕೂಡ ಸರ್ಕಾರದ ಮುಂದೆ ಇಲ್ಲ ಯಾವುದೇ ಮುಲಾಜು ಒತ್ತಡ ಇಲ್ಲ. ಎಸ್ ಪಿಪಿ ಬದಲಾವಣೆ ಆಗಬೇಕಾದರೂ ಒಂದು ಕಾರಣವಿದೆ ದರ್ಶನ್ ಮ್ಯಾನೇಜರ್ ನಾಪತ್ತೆ ಬಗ್ಗೆ ಮಾಹಿತಿ ಇಲ್ಲ ಎಂದು ಪರಮೇಶ್ವರ್ ತಿಳಿಸಿದರು. : , , , , ,