ಇಂದು ಸಂಜೆ ಕಿಚ್ಚ ಸುದೀಪ್ ‘ಕೋಟಿಗೊಬ್ಬ 3’ ಟ್ರೈಲರ್ ರಿಲೀಸ್ ಬೆಂಗಳೂರು, ಅಕ್ಟೋಬರ್ 07, 2021 (..):ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಟ್ರೈಲರ್ ಇಂದು ಸಂಜೆ ಬಿಡುಗಡೆಯಾಗಲಿದೆ. ಅಕ್ಟೋಬರ್ 14 ರಂದು ಚಿತ್ರ ತೆರೆ ಕಾಣಲಿದ್ದು, ಇದಕ್ಕೂ ಮೊದಲು ಚಿತ್ರತಂಡ ಟ್ರೈಲರ್ ರಿಲೀಸ್ ಮಾಡುತ್ತಿದೆ. ಕೋಟಿಗೊಬ್ಬ 3 ಟ್ರೈಲರ್ ಬಗ್ಗೆ ಸುದೀಪ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದ್ದು, ಯು/ಎ ಸರ್ಟಿಫಿಕೇಟ್ ದೊರೆತಿದೆ. ಈ ಸಿನಿಮಾದಲ್ಲೂ ಕೋಟಿಗೊಬ್ಬ 2 ನಂತೆ ಕಿಚ್ಚನ ಫೈಟ್, ಥ್ರಿಲ್ಲಿಂಗ್ ದೃಶ್ಯಗಳಿವೆ ಎನ್ನಲಾಗಿದೆ. ಇಂದು ಸಂಜೆ ಬಿಡುಗಡೆಯಾಗಲಿರುವ ಟ್ರೈಲರ್ ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾದಿದ್ದಾರೆ.