ಬೆಂಗಳೂರಿನಲ್ಲಿ ಮಕ್ಕಳನ್ನ ಖರೀದಿಸಿ ಮಾರಾಟ ಮಾಡ್ತಿದ್ಧ ಗ್ಯಾಂಗ್ ಅಂದರ್. ಬೆಂಗಳೂರು,ಅಕ್ಟೋಬರ್,6,2021(..):ಬಡವರಿಂದ ಮಕ್ಕಳನ್ನ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ದೇವಿಷಣ್ಮುಗಮ್ಮ, ಮಹೇಶ್ ಕುಮಾರ್,ರಂಜನಾ ದೇವಿಪ್ರಸಾದ್, ಧನಲಕ್ಷ್ಮಿ, ಜನಾರ್ಧನ್ ಬಂಧಿತ ಆರೋಪಿಗಳು ಬಂಧಿತ ಆರೋಪಿಗಳು ಬಡವರ ಬಳಿ ಕಡಿಮೆ ಬೆಲೆಗೆ ಮಕ್ಕಳನ್ನ ಖರೀದಿಸುತ್ತಿದ್ದರು. ನಂತರ ಮಕ್ಕಳಿಲ್ಲದ ಪೋಷಕರನ್ನ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಅವರಿಗೆ ಮಕ್ಕಳನ್ನ 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಈವರೆಗೆ 11 ಮಕ್ಕಳನ್ನ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಆರೋಪಿಗಳನ್ನ ಬಂಧಿಸಲಾಗಿದ್ದು 13 ಮಕ್ಕಳನ್ನ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. : - - --