ಬೆಂಗಳೂರಿನಲ್ಲಿ ಮಕ್ಕಳಿಬ್ಬರ ಜತೆ ತಾಯಿ ಆತ್ಮಹತ್ಯೆ ಪ್ರಕರಣ: ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ ಶಾಸಕ ಸಾ.ರಾ ಮಹೇಶ್. ಬೆಂಗಳೂರು,ಅಕ್ಟೋಬರ್,3,2021(..):ಬೆಂಗಳೂರಿನಲ್ಲಿ ತಾಯಿಮಕ್ಕಳಿಬ್ಬರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ ಬಾಕಿ ಕೋವಿಡ್ ಪರಿಹಾರ ಕೊಡಿಸುವಂತೆ ಜೆಡಿಎಸ್ ಶಾಸಕ ಸಾರಾ ಮಹೇಶ್ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಪತ್ರ ಬರೆದಿರುವ ಶಾಸಕ ಸಾ.ರಾ ಮಹೇಶ್, ಸರ್ಕಾರ ಸಕಾಲಕ್ಕೆ ಆ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಪರಿಹಾರ ನೀಡಿದ್ದರೇ ಆ ಜೀವಗಳು ಉಳಿಯುತ್ತಿದ್ದವು. ಈಗಲಾದರೂ ಆ ಕುಟುಂಬಕ್ಕೆ ಬಾಕಿ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸರ್ಕಾರ ಪ್ರಮಾಣಿಕ ನೌಕರರ ಹಿತ ಕಾಯುತ್ತಿಲ್ಲ. ಭ್ರಷ್ಟ ನೌಕರರು ದಿನನಿತ್ಯ ಲೂಡಿ ಮಾಡುತ್ತಿದ್ದಾರೆ ಎಂದು ಪತ್ರದ ಮೂಲಕ ಶಾಸಕ ಸಾ.ರಾ ಮಹೇಶ್ ಅಸಮಾಧಾನ ಹೊರ ಹಾಕಿದ್ದಾರೆ. ಪತಿ ಕೋವಿಡ್ ನಿಂದ ಮೃತಪಟ್ಟ ಹಿನ್ನೆಲೆ ಮಾನಸಿಕವಾಗಿ ನೊಂದು ಬೆಂಗಳೂರಿನಲ್ಲಿ ಪತ್ನಿ ತನ್ನಿಬ್ಬರ ಮಕ್ಕಳ ಜೊತೆ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. : - -