ಬಡತನದಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣು. ಮೈಸೂರು.ಅಕ್ಟೋಬರ್,3,2021(..):ಬಡತನದಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಜನತಾ ನಗರದಲ್ಲಿ ಈ ಘಟನೆ ನಡೆದಿದೆ. ರಕ್ಷಿತಾ( 20) ಮೃತ ಆತ್ಮಹತ್ಯೆಗೆ ಶರಣಾದವರು. ಗ್ಯಾಂಗ್ರಿನ್‌ನಿಂದಾಗಿ ತಂದೆ ಮಹದೇವ್ ಕಾಲು ಕಳೆದುಕೊಂಡಿದ್ದರು. ಆಟೋ ಓಡಿಸಿ ತಂದೆ ಮಹದೇವ್ ಕುಟುಂಬಕ್ಕೆ ಆಧಾರವಾಗಿದ್ದರು. ತಾಯಿ ಶೀಲಾ ಮನೆ ಕೆಲಸ ಮಾಡುತ್ತಾರೆ. ಈ ಮಧ್ಯೆ ಈ ಬಡ ಕುಟುಂಬ ಆರ್ಥಿಕ ಮುಗ್ಗಟ್ಟನ್ನ ಎದುರಿಸುತ್ತಿತ್ತು ಎನ್ನಲಾಗಿದೆ ಈ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : – - - -