ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಕಾನೂನು ಸಂಕಷ್ಟ ಬೆಂಗಳೂರು, ಅಕ್ಟೋಬರ್ 02, 2021 (..):ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ನಿಶಾ ಯೋಗೇಶ್ವರ್ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲೀಕರಾಗಿದ್ದಾರೆ. ಇಂತಹ ಅವರು ಕಂಪನಿಗಾಗಿ 2017ರಲ್ಲಿ ಗೋದಾಮೊಂದನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಟಿಎಪಿಸಿಎಂಎಸ್ ನಿಂದ ಪಡೆದಿದ್ದಾರೆ. ಟಿಎಪಿಸಿಎಂಎಸ್ ಗೆ ಸೇರಿದಂತ ಜಾಗದಲ್ಲಿ ಗೋದಾಮು ಬಾಡಿಗೆ ಪಡೆದಿದ್ದಂತ ಅವರು, ಏಪ್ರಿಲ್ 2018ರಿಂದ ಬಾಡಿಗೆಯನ್ನೇ ಪಾವತಿಸಿಲ್ಲ. ಟಿಎಪಿಸಿಎಂಎಸ್ ಆಡಳಿತ ಮಂಡಳಿಯೂ ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧರಿಸಿದೆ. ಹೀಗಾಗಿ ನಿಶಾ ಯೋಗೇಶ್ವರ್ ಗೆ ಇದೀಗ ಸಂಕಷ್ಟ ಎದುರಾಗಿದೆ. : ,