ಮೈಸೂರು ದಸರಾ ವೆಬ್ ಸೈಟ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ. ಮೈಸೂರು,ಅಕ್ಟೋಬರ್,1,2021(..):ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದ್ದು ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದರು. ವೆಬ್ ಸೈಟ್ ದಸರಾ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸಲಿದ್ದು, ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆ, ವರ್ಚುವಲ್ ಹಾಗೂ ನೇರ ಪ್ರಸಾರಗಳು ವೆಬ್ ಸೈಟ್ ನಲ್ಲಿ ಲಭ್ಯವಿರಲಿದೆ. ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ನಂದಿಪೂಜೆ, ಜಂಬೂಸವಾರಿ ಮೆರವಣಿಗೆ ನೇರ ಪ್ರಸಾರವಾಗಲಿದೆ. ದಸರಾ ಕಾರ್ಯಕ್ರಮಗಳ ವಿವರ, ವೇಳಾಪಟ್ಟಿ, ಉಪಸಮಿತಿ ವಿವರ, ಛಾಯಾಚಿತ್ರಗಳ ಮಾಹಿತಿ ವೆಬ್ ಸೈಟ್ ನಲ್ಲಿ ಲಭ್ಯವಿರಲಿದ್ದು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಮಾಹಿತಿ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ಸಭಾಂಗಣದಲ್ಲಿ ಇಂದು ಸಚಿವ ಎಸ್.ಟಿ ಸೋಮಶೇಖರ್ ವೆಬ್ ಸೈಟ್ ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಬಾರಿಯೂ ದಸರಾ ಗೋಲ್ಡ್ ಕಾರ್ಡ್, ಸಿಲ್ವರ್ ಕಾರ್ಡ್ ಯಾವುದೂ ಇಲ್ಲ. ಸದ್ಯಕ್ಕೆ ಕಾರ್ಯಕ್ರಮದ ವೀಕ್ಷಣೆಗೆ ಹೆಚ್ಚಿನ ಜನರಿಗೆ ಅವಕಾಶ ಕೊಡಲು ಕೇಳಿದ್ದೇವೆ. ಇನ್ನೂ ಅದಕ್ಕೆ ನಮಗೆ ಯಾವ ಉತ್ತರವೂ ಬಂದಿಲ್ಲ. ಅದರ ನಿರೀಕ್ಷೆಯಲ್ಲೇ ಇದ್ದೇವೆ‌ ಎಂದರು. : - - - . … - .. , 1, 2021 (..): - . - .. . . ’ . , , , . . , , - , ., , . , .. ‘ , . “ , , .”: - / .. / / /