ಪಿಟಿಸಿಎಲ್ ಜಮೀನುಗಳನ್ನ ಭೂ ಪರಿವರ್ತನೆ ಮಾಡಿದ್ರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ-ಸರ್ಕಾರದಿಂದ ಸುತ್ತೋಲೆ. ಬೆಂಗಳೂರು,ಅಕ್ಟೋಬರ್,1,2021(..):ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಪಿಟಿಸಿಎಲ್ ಜಮೀನುಗಳನ್ನ ಭೂ ಪರಿವರ್ತನೆ ಮಾಡಿದ್ದಲ್ಲಿ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಭೂರಹಿತರಾಗುವುದನ್ನ ತಪ್ಪಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಭೂಮಿ ಪರಭಾರೆ ನಿಷೇಧ)ಅಧಿನಿಯಮ 1978 ರ ಅನ್ವಯ ನಿರ್ಭಂಧ ವಿಧಿಸಲಾಗಿದೆ. ಈ ಸಂಬಂಧ ಹಲವು ಸುತ್ತೋಲೆಗಳನ್ನೂ ಸಹ ಹೊರಡಿಸಿದೆ. ಹೀಗಿದ್ದೂ ಕೆಲವು ಸ್ಥಾಪಿತ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಂಡು ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳನ್ನ ಸರ್ಕಾರದ ಅನುಮತಿ ಪಡೆಯದೆ ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಭೂ ರಹಿತವಾಗುವುದನ್ನ ತಪ್ಪಿಸಲು ಪಿಟಿಸಿಎಲ್ ಕಾಯ್ದೆ ಗಂಭೀರವಾಗಿ ಪಾಲಿಸಬೇಕಿದೆ. ಹಾಗೊಂದು ವೇಳೆ ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದೆ ಭೂ ಪರಿವರ್ತನೆ ಮಾಡಿದ್ದಲ್ಲಿ ಜಿಲ್ಲಾಧಿಕಾರಿಗಳೇ ನೇರ ಜವಾಬ್ದಾರಿ ಮಾಡಲಾಗುವುದೆಂದು ಸುತ್ತೋಲೆ ಹೊರಡಿಸಲಾಗಿದೆ. ಕರ್ನಾಟಕ ಸಚಿವಾಲಯ ಬಹುಮಹಡಿ ಕಟ್ಟಡಗಳ ಸರ್ಕಾರದ ಅಧೀನ ಕಾರ್ಯದರ್ಶಿ(ಕಂದಾಯ ಇಲಾಖೆ) ಸಿ.ಬಲರಾಮ್ ಸುತ್ತೋಲೆ ಹೊರಡಿಸಿದ್ದಾರೆ. : – - – - - … : . , 1, 2021 (..): , . ( ) , 1978 ( 2 1979) / . . , ., / . , ( ) .: / / //