ಅ.2ರಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ‘ರಾಗಿಕಣ ಸಂತೆ’. ಬೆಂಗಳೂರು,ಸೆಪ್ಟಂಬರ್,30,2021(..):ರಾಗಿಕಣ ತಂಡದ ವತಿಯಿಂದ ಅಕ್ಟೋಬರ್ 2 ಮತ್ತು 3 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ರಾಗಿಕಣ ಸಂತೆಯನ್ನ ಏರ್ಪಡಿಸಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ರಾಗಿಕಣ ಸಂತೆ ಪುನರಾರಂಭಗೊಂಡು ಅಕ್ಟೋಬರ್ 3 ರಂದು ಕೂಡ ಮುಂದುವರೆಯಲಿದೆ, ಉತ್ಪನ್ನ ಕ್ಷೇತ್ರಕ್ಕೆ ಎಂದೂ ಒತ್ತು ಕೊಡುವ ಸಂತೆ, ಕೂವಿಡ್ ಮಹಾಮಾರಿಯಿಂದ ತತ್ತರಿಸುತ್ತಿರುವ ಶ್ರಮಿಕ ಸಮುದಾಯದೊಂದಿಗೆ ಕೈಗೂಡಿಸುವ ಕಾರ್ಯದಲ್ಲಿ ಸದಾ ನಿರತವಾಗಿದೆ. ಬರುವ ಎರಡು ದಿನಗಳ ಸಂತೆಯಲ್ಲಿ, ಇತರ ಕೈಉತ್ಪನ್ನಗಳ ಜೊತೆಗೆ ಕೈಮಗ್ಗ ಮತ್ತು ಖಾದಿ ಕ್ಷೇತ್ರಕ್ಕೆ ವಿಶೇಷ ಗಮನ ನೀಡಲಾಗಿದೆ. ಅಕ್ಟೋಬರ್ 2 ರಂದು 11 ಘಂಟೆಗೆ ಸಂತೆಯ ಉದ್ಘಾಟನೆಯನ್ನು ನಿವೃತ್ತ ಐಪಿಸ್ ಅಧಿಕಾರಿ ಹಾಗೂ ಗಾಂಧೀವಾದಿ ಅಜಯ್ ಕುಮಾರ್ ಸಿಂಗ್ ರವರು ನಡೆಸಲಿದ್ದಾರೆ. ಅಕ್ಟೋಬರ್ 2 ರಂದು ಮೊದಲಿಗೆ ನಿಶಾಂತ್ ಗುರವ್ ಅವರು ಗಾಂಧಿ ಸ್ಮರಣ ಗೀತೆಗಳನ್ನು ಹಾಡಲಿದ್ದಾರೆ. ನಿಶಾಂತ್ ಎನ್ನೊಬಾಟನಿ ಕ್ಷೇತ್ರದಲ್ಲಿ ಸಂಶೋಧಕರಾಗಿದ್ದಾರೆ. ನಂತರ ಹೆಸರಾಂತ ನೃತ್ಯಕಲಾವಿದ ಸುಹಾಸಿನಿ ಕೌಲಗಿಯವರಿಂದ ಭರತನಾಟ್ಯ ಪ್ರದರ್ಶನವಿದೆ. ಈ ಕಾರ್ಯಕ್ರಮದಲ್ಲಿ ತತ್ತರಿಸುತ್ತಿರುವ ರೈತರ ಬವಣೆ, ಅತೀವೇಗದಲ್ಲಿ ನಾಶವಾಗುತ್ತಿರುವ ಪರಿಸರದ ಪರಿಸ್ಥಿತಿಯ ಬಗ್ಗೆ ಆಳವಾದ ಯೋಚನೆಗಳಿವೆ. ಅಕ್ಟೋಬರ್ 3 ರಂದು 11 ಘಂಟೆಗೆ ಚರ್ಚಾಘೋಷ್ಠಿಯೊಂದನ್ನು ಏರ್ಪಡಿಸಲಾಗಿದೆ. ಇದರ ವಿಷಯ ‘ಖಾದಿ ಮತ್ತು ಕೈಮಗ್ಗದಲ್ಲಿ ಪ್ರಸ್ತುತ ಸವಾಲುಗಳು’. ವಿಮೊರ್ ಸಂಸ್ಥೆಯ ಪವಿತ್ರಾ ಮುದ್ದಯ್ಯ, ಮೆಟಫರ್ ರಾಚ ದ ರವಿಕಿರಣ್, ಸಂಸ್ಥೆಯ ಸ್ವಾಮಿನಾಥನ್ ವೃತಲಿಂಗಂರವರು ಈ ಗೋಷ್ಟಿಯಲ್ಲಿ ಭಾಗವಹಿಸುವವರು, ಈ ಚರ್ಚೆಯನ್ನು ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ವಿನ್ಯಾಸಕಿ ಇಳಾ ದುಬೆ ಸಮನ್ವಯಿಸುತ್ತಾರೆ. ಎರಡೂ ದಿನಗಳ ರಾಗಿಕಣ ಸಂತೆಯಲ್ಲಿ ವೈವಿಧ್ಯ ಕೈಉತ್ಪನ್ನ ಪದಾರ್ಥಗಳು ಮಾರಾಟಕ್ಕಿರಲಿವೆ. ಪ್ರಖ್ಯಾತ ಖಾದಿ ಮತ್ತು ಕ್ರೈಮಗ್ಗ ಸಂಸ್ಥೆಗಳಾದ ಜನಪದ ಖಾದಿ, ಮಗನ್ ಖಾದಿ, ಚರಕ ಸೊಸೈಟಿ, ದೇಸಿ ಟ್ರಸ್ಟ್, ಕೈಮಗ್ಗ ನೇಕಾರರ ಒಕ್ಕೂಟ, ಸಂಸ್ಥೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ನೈಸರ್ಗಿಕವಾಗಿ ಬೆಳೆದ ಸೊಪ್ಪು ತರಕಾರಿಗಳು, ದಿನಸಿ ಪದಾರ್ಥಗಳು, ಗಾಣದ ಎಣ್ಣೆಗಳು, ಕೈಉತ್ಪಾದಿತ ಕಲಾತ್ಮಕ ಹಾಗೂ ಕರಕುಶಲ ವಸ್ತುಗಳು ಅಲ್ಲದೆ ಇನ್ನೂ ಬಹಳಷ್ಟು ಪದಾರ್ಥಗಳು ಮಾರಾಟಕ್ಕಿರಲಿವೆ. ರಾಗಿಕಣವು ಬೆಂಗಳೂರಿನ ನಗರವಾಸಿಗಳನ್ನು ಸಂತೆಯ ಅಪೂರ್ವ ಅನುಭವ ಪಡೆಯಲು ಆಹ್ವಾನಿಸುತ್ತದೆ. ಗ್ರಾಮಗಳಲ್ಲಿ ಅಸಂಖ್ಯಾತ ಬಡ ಕಾಯಕ ಜೀವಿಗಳಿಗೆ ಕೊವಿಡ್ ತಂದ ದಾರುಣ ಉದ್ಯೋಗ ನಾಶ ಮತ್ತು ಅಲ್ಲೋಲ ಕಲ್ಲೋಲ ಸ್ಥಿತಿಯ ಬಗ್ಗೆ ವಿಶದವಾಗಿ ಅರಿಯಲು, ಅವರೊಂದಿಗೆ ಕೈ ಜೋಡಿಸಲು ಸಂತೆಗೆ ಬನ್ನಿ ಎಂದು ರಾಗಿಕಣ ತಂಡ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಾಗಿಕಣ ತಂಡ ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆಯ ಹತ್ತಿರ, ಬೆಂಗಳೂರು .@. … 2 ! , , 2, 3 . . . 2 11 , . . . , , . . , . , . & , , . 3 11 , “ & ” . , , . , , , . . , , , , , ’ . , , , . . , ://..///1vGTSp7afHTJRje1Onm-GsAN8ajboWeAF? = : - -- –