ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಪರಿಹಾರ: ಸಚಿವ ಅಶೋಕ್ ಸ್ಪಷ್ಟನೆ, ಇಲ್ಲಿದೆ ಮಾರ್ಗಸೂಚಿ… ಬೆಂಗಳೂರು, ಸೆಪ್ಟೆಂಬರ್ 30, 2021 (..):ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರ ಕೊಡುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ಪಡಿಸಿದ್ದಾರೆ. “ರಾಜ್ಯ ಸರ್ಕಾರ ಜನರ ಪರವಾಗಿ ಇದೆ. ನಮ್ಮದು ಜನಸ್ನೇಹಿ ಸರ್ಕಾರ. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರಿಗೆ 1 ಲಕ್ಷ ರೂ ವಿಪತ್ತು ಪರಿಹಾರ ನಿಧಿಯಿಂದ ಕೊಡುತ್ತೇವೆ ಎಂದು ವಿಧಾನ ಸೌಧದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ 50 ಸಾವಿರ ರೂ‌. ನೀಡುತ್ತದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಒಟ್ಟು 1.5 ಲಕ್ಷ ರೂ‌. ಪರಿಹಾರ ಸಿಗುತ್ತದೆ” ಎಂದು ಭರವಸೆ ಕೊಟ್ಟಿದ್ದಾರೆ. ಮಾರ್ಗಸೂಚಿ ಇಲ್ಲಿದೆರಾಜ್ಯದ ಎಲ್ಲ ತಾಲ್ಲೂಕು ಕಚೇರಿ, ನಾಡ ಕಚೇರಿ, ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಯಲ್ಲಿ ಕೋವಿಡ್ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಎಲ್ಲೇ ಮೃತಪಟ್ಟಿದ್ದರೂ ಮೃತರ ವಾಸಸ್ಥಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ಮರಣ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ನಾಗಿರಬೇಕು ಜೊತೆಗೆ ಮೃತರ ವಯಸ್ಸು 18 ವರ್ಷ ತುಂಬಿರಬೇಕು’ ಎಂದು ಮಾರ್ಗಸೂಚಿ ಬಿಡುಗಡೆ ಆರ್. ಅಶೋಕ್ ವಿವರಿಸಿದ್ದಾರೆ. : : … : ., 30, 2021 (..): . . 1 . , , -. “ . 1 . . .50,000. . 1.5 ,” . : , . , . , , 18 . : / .1.5 / / .