ಮೈಸೂರಿನಲ್ಲಿ ಭೂ ಮಾಫಿಯಾ : ನ್ಯಾಯಾಲದ ಮೊರೆ ಹೋಗಲು ಮುಂದಾದ ಆರ್ ಟಿಐ ಕಾರ್ಯಕರ್ತ ಗಂಗರಾಜು. ಮೈಸೂರು, ಸೆ.29, 2021 : (.. ) :ಮೈಸೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ಸರ್ವೆ ಕಾರ್ಯ ನಡೆಸಿ ವರದಿ ನೀಡಿಲ್ಲ ಎಂದು ಆರೋಪಿಸಿ, ಕೋರ್ಟ್ ಮೊರೆ ಹೋಗಲು ಸಾಮಾಜಿಕ ಕಾರ್ಯಕರ್ತ ಗಂಗರಾಜು ಮುಂದಾಗಿದ್ದಾರೆ. ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿದ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು ಹೇಳಿದಿಷ್ಟು… ಮೈಸೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೆ ಆಯುಕ್ತರು ರಚಿಸಿದ್ದ ತಂಡವನ್ನು ರದ್ದು ಮಾಡಿದ್ದ ಸರ್ಕಾರ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸರ್ವೆ ಕಾರ್ಯ ನಡೆಸಿ ವರದಿ ನೀಡಲು ಸೂಚಿಸಲಾಗಿತ್ತು. ಭೂ ಸರ್ವೆಗೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸರ್ವೆ ಮಾಡಿ ಮೂರು ವಾರದಲಿ ವರದಿ ಸಲ್ಲಿಸುವಂತೆ ಸರ್ಕಾರ.ಆದೇಶಿಸಿತ್ತು. ಆದರೆ ಮೂರು ವಾರ ಕಳೆದರೂ ಇನ್ನೂ ವರದಿ ನೀಡಲ್ಲದಿರುವುದು ಅನುಮಾನಕ್ಕೆ ಎಡೆಮಾಡಿದೆ. ಸರ್ಕಾರ ಹಾಗೂ ಅಧಿಕಾರಿಗಳ ಬಗ್ಗೆ ವಿಶ್ವಾಸ ಇಲ್ಲವೆಂದು ನ್ಯಾಯಲದ ಮೊರೆ ಹೋಗಲು ನಿರ್ಧಾರ. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನ ಪಾರ್ಟಿ ಮಾಡುತ್ತೇನೆ. ಎಲ್ಲರೂ ನ್ಯಾಯಾಲದ ಕಟೆಕಟೆಯಲ್ಲಿ ನಿಲ್ಲ ಬೇಕಾಗುತ್ತದೆ. ಕಾಲಹರಣ ಮಾಡಿ ಈ ಹಗರಣವನ್ನು ಮುಚ್ಚುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಯ ಕೇಳಲು ಹೋದ ನನಗೆ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೂಡಿ ಎಂದರು ರಕ್ಷಣೆ ಕೊಡುತ್ತಿಲ್ಲ. ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಭೂಗಳ್ಳರ ವಿರುದ್ಧ ತನಿಖೆಗೆ ಮುಂದಾಗುತ್ತಿಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ‌. ಹಾಗಾಗಿ ಉಚ್ಚನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇನೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಹೇಳಿಕೆ. ಮೈಸೂರಿನಲ್ಲಿ ಭೂ ಮಾಫಿಯಾ ವಿಚಾರ: ಇಂದು ಅಥವಾ ನಾಳೆ ಸರ್ಕಾರಕ್ಕೆ ವರದಿ ಮೈಸೂರಿನಲ್ಲಿ ಭೂ ಮಾಫಿಯಾ ವಿಚಾರ ಸಂಬಂಧ ಭೂ ಸರ್ವೆಗೆ ಸರ್ಕಾರ ಮೂರು ವಾರಗಳ ಗಡುವು ನೀಡಿತ್ತು. ಇಂದು ಅಥವಾ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ತಿಳಿಸಿದ್ದಾರೆ. ಸರ್ಕಾರ ಭೂ ಸರ್ವೆಗೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ಮೂರು ವಾರದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು. : ------------- … : , 29, 2021 (..): , . . . . . “ . . . . ,” . . ’ . , , . .: / / / / /