ಟಿ-20ಯಲ್ಲಿ ಹೊಸ ದಾಖಲೆ ಬರೆದ ವಿಂಡೀಸ್’ನ ಪೊಲ್ಲಾರ್ಡ್ ಬೆಂಗಳೂರು. ಸೆಪ್ಟೆಂಬರ್ 29, 2021 (..):ಟಿ20ಯಲ್ಲಿ 10,000 ರನ್, 300 ವಿಕೆಟ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ ವೆಸ್ಟ್ ಇಂಡೀಸ್ ಕಿರನ್ ಪೊಲ್ಲಾರ್ಡ್. ಹೌದು. ಟಿ20 ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ಕಿರನ್ ಪೊಲ್ಲಾರ್ಡ್ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ವಿಕೆಟ್ ಪಡೆದ ಅವರು 300 ವಿಕೆಟ್ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ ವಿಶ್ವದ ವಿವಿಧ ದೇಶಗಳ 25 ಕ್ಕೂ ಹೆಚ್ಚು ಫ್ರಾಂಚೈಸಿ ತಂಡಗಳ ಪರವಾಗಿ ಟಿ20 ಕ್ರಿಕೆಟ್ ಆಡಿದ್ದಾರೆ. : -20