ಬೆಂಗಳೂರಿನಲ್ಲಿ ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ. ಬೆಂಗಳೂರು,ಸೆಪ್ಟಂಬರ್,28,2021(..):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಡೇರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರರ್ಸ್ ಒಳಗಡೆ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಈ ಕಟ್ಟಡ 50 ವರ್ಷದ ಹಳೆಯದ್ದು ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ಬಿದ್ದಿದ್ದ ಕಟ್ಟಡದಿಂದ ಅರ್ಧ ಕಿಮೀ ದೂರದಲ್ಲಿ ಇಂದು ಮತ್ತೊಂದು ಕಟ್ಟಡ ಕುಸಿತಗೊಂಡಿದೆ. ಈ ಕಟ್ಟಡದಲ್ಲಿ 18 ಕುಟುಂಬ ವಾಸವಾಗಿತ್ತು. ಕೆಎಂಎಫ್ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ ಎನ್ನಲಾಗಿದೆ. ಹಳೆಯ ಕಟ್ಟಡ ಅಂತ ಗೊತ್ತಿದ್ದರು ಸಿಬ್ಬಂದಿಗಳಿಗೆ ವಾಸಮಾಡಲು ಬಮೂಲ್ ಅಧಿಕಾರಿಗಳು ಅವಕಾಶ ಕೊಟ್ಟಿದ್ದರು. : - - 3 - -