ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ರೆ ಜನ ನಿಮ್ಮನ್ನ ಕಸದ ತೊಟ್ಟಿಗೆ ಹಾಕ್ತಾರೆ- ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರ ಶೇಖರ್ ಎಚ್ಚರಿಕೆ. ಬೆಂಗಳೂರು,ಸೆಪ್ಟಂಬರ್,27,2021(..):ನಿಮಗೆ ಅಧಿಕಾರದ ಆಸೆ ಇದ್ದರೆ ಕೃಷಿ ತಿದ್ಧುಪಡಿ ಕಾಯ್ದೆಯನ್ನ ಹಿಂಪಡೆಯಿರಿ. ಇಲ್ಲದಿದ್ರೆ ಜನರು ನಿಮ್ಮನ್ನ ಕಸದ ತೊಟ್ಟಿಗೆ ಎಸೆಯುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಈ ಮಧ್ಯೆ ನಗರದ ಟೌನ್ ಹಾಲ್ ನಿಂದ ರೈತರ ಪ್ರತಿಭಟನಾ ರ್ಯಾಲಿ ಶುರವಾಗಿದ್ದು ಫ್ರೀಡಂಪಾರ್ಕ್ ಗೆ ತಲುಪಲಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್, ಸರ್ಕಾರ ಬಂದ್ ವಿಫಲಗೊಳಿಸಲು ಯತ್ನಿಸುತ್ತಿದೆ. ಹೀಗಾಗಿ ಕೆಎಸ್ ಆರ್ ಟಿಸಿ, ಬಿಎಂಟಿಸಿಬಸ್ ಗಳನ್ನ ಓಡಿಸುತ್ತಿದ್ದಾರೆ. ದೇಶಾಧ್ಯಂತ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಧ್ವನಿ ಎತ್ತಿದ್ದಾರೆ . ಈ ಧ್ವನಿ ಪ್ರಧಾನಿ ಮೋದಿ ಕಿವಿಗೆ ಕೇಳಿಸಬೇಕು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಸಹಕಾರ ನೀಡಬೇಕು. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರತಿಭಟನೆಗೆ ಕೆಆರ್ ಪುರ ಸಂತೆ ವ್ಯಾಪಾರಗಳ ಒಕ್ಕೂಟ ಸಾಥ್ ಕೊಟ್ಟಿದ್ದು ಕೆಆರ್ ಪುರ ಸಂತೆ ಮಾರುಕಟ್ಟೆ ಅಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ಗೋಣಿ ಚೀಲ ತೊಟ್ಟು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ರ್ಯಾಲಿ ನಿಲ್ಲಿಸಲು ಪೊಲೀಸರು ಮುಂದಾದರು. ಕೆ.ಆರ್.ಪುರ ಮಾರ್ಕೆಟ್ ನಿಂದ 100 ಮೀ. ಸಾಗಿದ ರ್ಯಾಲಿ ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನೆಗೆ ಮುಂದಾದರು. : - - – – - … “ ’ : ., . 27, 2021 (..): “ , , ,” . . . , ’ . . , . “ . . . , , ,” . .. . .. , .: / / /